ಡೈಲಿವಾರ್ತೆ:15/ಏಪ್ರಿಲ್ /2026

ತುಮ್ಮಿನಕಟ್ಟಿಯಲ್ಲಿ ಸಂವಿಧಾನ ಶಿಲ್ಪಿ ಹಾಗೂ ಹಸಿರು ಕ್ರಾಂತಿ ಹರಿಕಾರರ ಜಯಂತೋತ್ಸವ ವಿಜೃಂಭಣೆ

​ರಾಣೇಬೆನ್ನೂರು: ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ, ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಭಾರತ ಸಂವಿಧಾನದ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತೋತ್ಸವವನ್ನು ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

​ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ಭಾರತದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗೆ ಅವರು ನೀಡಿದ ಅಪ್ರತಿಮ ಕೊಡುಗೆಗಳನ್ನು ಸ್ಮರಿಸಿದರು. ಶೋಷಿತ ವರ್ಗದ ದನಿಯಾಗಿದ್ದ ಅಂಬೇಡ್ಕರ್ ಹಾಗೂ ದೇಶದ ಕೃಷಿ ರಂಗದಲ್ಲಿ ಕ್ರಾಂತಿ ತಂದ ಜಗಜೀವನ್ ರಾಮ್ ಅವರ ತತ್ತ್ವಗಳು ಇಂದಿಗೂ ಸಾರ್ವಕಾಲಿಕ ಎಂದು ಆಶಯ ವ್ಯಕ್ತಪಡಿಸಲಾಯಿತು.

ಈ ಸಮಾರಂಭದಲ್ಲಿ ತುಮ್ಮಿನಕಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ ಕಾವ್ಯ ಭರಮಪ್ಪ ಗೋವಿನಹಾಳ ಸೇರಿದಂತೆ ಪ್ರಮುಖ ಮುಖಂಡರಾದ ಧರ್ಮರಾಜ ಕಡೆಮನಿ, ಅರುಣ ಗೋವಿನಾಳ, ಚಂದ್ರಪ್ಪ ಪೂಜಾರ ಹಾಗೂ ಭರಮಪ್ಪ ಗೋವಿನಹಾಳ ಉಪಸ್ಥಿತರಿದ್ದರು.

​ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ದುರ್ಗೇಶ್ ದೊಡ್ಡಮನಿ, ಬಸವರಾಜ್ ದೊಡ್ಡಮನಿ, ಆಂಜನೇಯ ಪಾಳ್ಯ, ಮಂಜಪ್ಪ ಗೋವಿನಾಳ, ಆಂಜನೇಯ ಗೋವಿನಾಳ, ರಾಜು ಹಲಗಿ, ಮರಿಯಪ್ಪ ಗೋವಿನಾಳ, ಎಲ್ಲಮ್ಮ ಗೋವಿನಾಳ, ದುರ್ಗಮ್ಮ ಹಲಗಿ, ಗೀತಮ್ಮ ಕಡೆಮನಿ, ಪ್ರಭು ಕಡೆಮನಿ, ಮಲಪ್ಪ ದೊಡ್ಡಮನಿ, ಭರ್ಮಪ್ಪ ಪೂಜಾರ, ಸತೀಶ್ ಕಡೆಮನಿ, ಮುತ್ತು ಕಡೆಮನಿ, ಅಣ್ಣಪ್ಪ ಪೂಜಾರ, ಕೋಟೆಪ್ಪ ಪೂಜಾರ ಹಾಗೂ ಯುವಕ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತೋತ್ಸವವನ್ನು ಯಶಸ್ವಿಗೊಳಿಸಿದರು.
​ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಸಂಘಟನಾ ಶಕ್ತಿಯಿಂದಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.