



ಡೈಲಿವಾರ್ತೆ: 10/ಜೂ./2026


ಬಿ.ಸಿ.ರೋಡ್ : ಹವ್ವಾಸ್ ಇಸ್ಲಾಮಿಕ್ ಅಕಾಡೆಮಿ ಉದ್ಘಾಟನೆ

ಬಂಟ್ವಾಳ : ಆಫ್ಜಲ್ ಅಲಿ ಮೆಮೊರಿಯಲ್ ಎಜ್ಯಕೇಷನಲ್ & ವೆಲ್ಫೆರ್ ಟ್ರಸ್ಟ್ ಇದರ ವತಿಯಿಂದ ಹವ್ವಾಸ್ ಇಸ್ಲಾಮಿಕ್ ಅಕಾಡೆಮಿಯ ಉದ್ಘಾಟನೆ ಇತ್ತೀಚಿಗೆ ಬಿ.ಸಿ.ರೋಡ್ ಕೈಕಂಬದ ಮಾಸ್ಟರ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಇರ್ಷಾದ್ ಹುಸೈನ್ ದಾರಿಮಿ ಮಿತ್ತಬೈಲ್ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷರಾದ ಅಬ್ದುಲ್ ಸಮದ್ ಪೊನ್ನೋಡಿ ಅಧ್ಯಕ್ಷತೆ ವಹಿಸಿದ್ದರು.
ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ರಝಾಕ್ ನಿಝಾಮಿ ಅಕಾಡಮಿಯ ಯಶಸ್ವಿಗೆ ಶುಭ ಹಾರೈಸಿ ಮಾತನಾಡಿದರು. ಟ್ರಸ್ಟ್ ಉಪಾಧ್ಯಕ್ಷ ಶoಸುದ್ದೀನ್ ಸಹದಿ ದುವಾ ನೆರವೇರಿಸಿದರು.

ಮುಖ್ಯ ಅಥಿಗಳಾಗಿ ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಸಾಗರ್, ಮೇಕ್ ಎ ಚೇಂಜ್ ಫೌಂಡೇಶನ್ ಅಧ್ಯಕ್ಷ ಸುಹೈಲ್ ಕಂದಕ್, ಯುವ ಕಾಂಗ್ರೆಸ್ ದಕ್ಷಿಣ ಕನ್ನಡ
ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲ್, ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಮೂನಿಸ್ ಆಲಿ, ಅಡ್ವಕೇಟ್ ಹಬೀಬ್ ರಹ್ಮಾನ್, ಸ್ಥಳೀಯ ಮಸೀದಿ ಅಧ್ಯಕ್ಷರುಗಳಾದ ಸಿದ್ದೀಕ್ ಹಾಜಿ ಡಿ. ಪಿ. ಪರ್ಲಿಯಾ, ಅಬ್ದುಲ್ ಖಾದರ್ ಕೆಳಗಿನ ಮಿತ್ತಬೈಲ್, ಮಿತ್ತಬೈಲ್ ಮದರಸ ಡೆವಲಪ್ಮೆಂಟ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಶರೀಫ್, ಮಿತ್ತಬೈಲ್ ರೇoಜ್ ಮದ್ರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಇಕ್ಬಾಲ್ ನಂದರಬೆಟ್ಟು, ಅರಫಾ ಜುಮಾ ಮಸೀದಿ ಪರ್ಲಿಯ ಇದರ ಉಪಾಧ್ಯಕ್ಷ ಎಸ್. ಪಿ. ಶಾಹುಲ್ ಹಮೀದ್, ಅಶ್ರಫ್ ಬಿಕ್ಕೋಡ್, ಟ್ರಸ್ಟಿಗಳಾದ ಅಜೀಝ್ ಪಾಣೆ ಮಂಗಳೂರು, ಮಹಮ್ಮದ್ ಹನೀಪ್ ನೆಹರುನಗರ, ಅಕ್ಬರ್ ಅಲಿ ಪೊನ್ನೋಡಿ ಉಪಸ್ಥಿತರಿದ್ದರು.
ಅಕಾಡಮಿ ಪ್ರಿನ್ಸಿಪಾಲ್ ಇಮ್ತಿಯಾಜ್ ಹುದವಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಅನ್ವರ್ ಅಝಹರಿ ಕಾರ್ಯಕ್ರಮ ನಿರೂಪಿಸಿದರು.