



ಡೈಲಿವಾರ್ತೆ: 11/ಜೂ./2026


ಉಡುಪಿ: ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಹುಟ್ಟುಹಬ್ಬ ಪ್ರಯುಕ್ತ ಬಡರೋಗಿಗಳಿಗೆ ಹಣ್ಣು ವಿತರಣೆ

ಉಡುಪಿ : ಸದಾಕಾಲ ಕನ್ನಡ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣ ಗೌಡರ, 60ನೇ ಹುಟ್ಟು ಹಬ್ಬದ ಪ್ರಯುಕ್ತ ಉಡುಪಿಯ ಅಜ್ಜರಕಾಡು ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ಮತ್ತು ಬ್ರೆಡ್ ವಿತರಿಸಲಾಯಿತು.

ಕರವೇ ಉಡುಪಿ ಜಿಲ್ಲಾಧ್ಯಕ್ಷ ಅ. ರಾ. ಪ್ರಭಾಕರ ಪೂಜಾರಿ ನೇತೃತ್ವದಲ್ಲಿ ಈ ಮಾನವೀಯ ಕಾರ್ಯ ನಡೆಯಿತು. ಜಿಲ್ಲಾ ಸರ್ಜನ್ ಅಶೋಕ್ ಅವರು ಉಪಸ್ಥಿತರಿದ್ದು ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಕರವೇ ಗೌರವಾಧ್ಯಕ್ಷ ಗೋಪಾಲ್ ಮೆಂಡನ್, ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಶಾಬುದ್ದೀನ್, ಪ್ರಧಾನ ಕಾರ್ಯದರ್ಶಿ ರಾಜು ಬಸ್ರೂರು, ಜಾಲತಾಣ ಸಂಚಾಲಕ ಪುರುಷೋತ್ತಮ್ ಪೂಜಾರಿ ಕೊಡಪಾಡಿ, ನಗರ ಅಧ್ಯಕ್ಷ ಅಜರುದ್ದೀನ್, ಕಾರ್ಯದರ್ಶಿ ಮಜೀದ್, ಅಯ್ಯಪ್ಪ, ಕುಶಾಲ್ ಅಮೀನ್, ಕಾಪು ತಾಲೂಕು ಅಧ್ಯಕ್ಷ ಸಿರಾಜುದ್ದೀನ್, ಕುಂದಾಪುರ ತಾಲೂಕು ಅಧ್ಯಕ್ಷ ಶಿವ ಆರ್. ಪೂಜಾರಿ, ಕಾರ್ಕಳ ತಾಲೂಕು ಉಪಾಧ್ಯಕ್ಷ ಮೊಬಿನ್, ಮಹಿಳಾ ಜಿಲ್ಲಾಧ್ಯಕ್ಷೆ ಅಶ್ವಿನಿ ನಾಯ್ಕ್, ಪ್ರಧಾನ ಸಂಚಾಲಕಿ ಜಯಶ್ರೀ ಸುವರ್ಣ, ಪ್ರಧಾನ ಕಾರ್ಯದರ್ಶಿ ಅನುಷಾ ಆಚಾರ್ ಪಳ್ಳಿ, ಗೌರವ ಸಲಹೆಗಾರರಾದ ಸುನಂದಾ ಟಿ. ಕೋಟ್ಯಾನ್, ಪವಿತ್ರ ಶೆಟ್ಟಿ, ವಿಜಯ ಶ್ರೀನಿವಾಸ್, ಶಶಿಕಲಾ, ಅನುಸೂಯ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.