ಡೈಲಿವಾರ್ತೆ: 28/ಜೂ./2026

ರೋಟರಿ ಕೋಟ ಸಿಟಿ ವತಿಯಿಂದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕ್ಕೆ ಚಾಲನೆ.

ಕೋಟ: ರೋಟರಿ ಕೋಟ ಸಿಟಿ ಹಾಗೂ ರೋಟರಿ ಕೋಟ ಸಾಲಿಗ್ರಾಮ ಇವರ ಜಂಟಿ ಆಯೋಗದಲ್ಲಿ ಕೋಟ ಸಮುದಾಯ ಕೇಂದ್ರ ದಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕ ಅಭಿಯಾನ ಕಾರ್ಯಕ್ರಮಕ್ಕೆ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಈ ಒಂದು ಕಾರ್ಯಕ್ರಮಕ್ಕೆ ಅಭೂತಪೂರ್ವ ಚಾಲನೆ ನೀಡಿ ಪೋಲಿಯೋ ಮುಕ್ತ ಭಾರತಕ್ಕೆ ಬಗ್ಗೆ ರೋಟರಿಯ ಕೊಡುಗೆಗಳ ಬಗ್ಗೆ ತಮ್ಮ ಹಿತ ನುಡಿಗಳನ್ನು ನುಡಿದರು.

ಈ ಸಂದರ್ಭದಲ್ಲಿ ಡಾಕ್ಟರ್ ಮಾದವ ಪೈ ಆರೋಗ್ಯ ಅಧಿಕಾರಿಗಳು ಸಮುದಾಯ ಕೇಂದ್ರ ಕೋಟ, ಕೋಟ ಸಿಟಿಯ ನಿಯೋಜಿತ ಅಧ್ಯಕ್ಷರಾದ ರೊ.ರಾಧಾಕೃಷ್ಣ ಬ್ರಹ್ಮಾವರ ಅಸಿಸ್ಟೆಂಟ್ ಗವರ್ನರ್ ಆದ ರೊ.ಶ್ಯಾಮ್ ಸುಂದರ್ ನಾಯರಿ ವಲಯ ತರಬೇತುದಾರರಾದ ರೊ. ಸತೀಶ್ ಶೆಟ್ಟಿ ಕೋಟ, ಸಾಲಿಗ್ರಾಮ ರೋಟರಿ ಕ್ಲಬ್ ಮಾಜಿ ಅಸಿಸ್ಟೆಂಟ್ ಗವರ್ನರ್ ಆದ ರೊ .ರಾಜೇಂದ್ರ ಸುವರ್ಣ ಕೋಟ, ಸಿಟಿಯ ಸದಸ್ಯರಾದ ರೊ. ಶರತ್ ಶೆಟ್ಟಿ ಹಾಗೂ ರೊ. ನಿತ್ಯಾನಂದ ನಾಯರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕೋಟ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಮ್ಮ ಸಂಸದರಿಗೆ ರಾಷ್ಟ್ರೀಯ ಹೆದ್ದಾರಿ 66ನ್ನು ಷಟ್ಪತ ಗೊಳಿಸಲು ಮನವಿ ಸಲ್ಲಿಸಲಾಯಿತು. ಕೋಟ ಸಿಟಿಯ ಕಾರ್ಯದರ್ಶಿಯಾದ ರೊ.ಉಮೇಶ್ ನಾಯರಿ ಅವರು ಕಾರ್ಯಕ್ರಮವನ್ನು ವಂದಿಸಿದರು.