


ಡೈಲಿವಾರ್ತೆ: 15/ಜು./2026


ವಿಜಯಕರ್ನಾಟಕ ವರದಿಗಾರ ನಾಗೇಶ್ ಗಾಣಿಗ ನೇರಳಕಟ್ಟೆ ಹೃದಯಾಘಾತದಿಂದ ನಿಧನ

ಕುಂದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರ ಭಾಗದ ವಿಜಯಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪತ್ರಕರ್ತ ನಾಗೇಶ್ ಗಾಣಿಗ ನೇರಳಕಟ್ಟೆ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಾಗೇಶ್ ಗಾಣಿಗ ಅವರು ತಮ್ಮ ಸರಳ ಸ್ವಭಾವ, ಸ್ನೇಹಪರ ನಡೆ ಹಾಗೂ ವೃತ್ತಿ ಬದ್ಧತೆಯಿಂದ ಪತ್ರಿಕಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಸಿದ್ದಾಪುರ ಹಾಗೂ ಸುತ್ತಮುತ್ತಲಿನ ಭಾಗಗಳ ಸ್ಥಳೀಯ ಸಮಸ್ಯೆಗಳು, ಜನಪರ ವಿಚಾರಗಳು ಮತ್ತು ಪ್ರಮುಖ ಸುದ್ದಿಗಳನ್ನು ವರದಿ ಮಾಡುವ ಮೂಲಕ ಅವರು ಜನರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದರು.
ಅವರ ಅಕಾಲಿಕ ನಿಧನಕ್ಕೆ ಪತ್ರಕರ್ತರು, ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.