


ಡೈಲಿವಾರ್ತೆ: 19/ಜು./2026


ಹೊಳೆನರಸೀಪುರಕ್ಕೆ ಅಂತಿಮ ಯಾತ್ರೆ ಹೊರಟ ಚೆನ್ನಮ್ಮ ಪಾರ್ಥಿವ ಶರೀರ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತಿಮ ಯಾತ್ರೆ ಆರಂಭವಾಗಿದೆ. ಚೆನ್ನಮ್ಮ ಅವರ ಪಾರ್ಥಿವ ಶರೀರ ಹೊತ್ತ ವಾಹನ ಬೆಂಗಳೂರಿನಿಂದ ಹಾಸನ ಕಡೆಗೆ ಹೊರಟಿದೆ.
ಅಂತಿಮ ಯಾತ್ರೆಗೂ ಮುನ್ನ ಚೆನ್ನಮ್ಮ ಅವರಿಗೆ ಕುಟುಂಬಸ್ಥರು ಕೊನೆಯ ಪೂಜೆ ಸಲ್ಲಿಸಿದರು. ಚೆನ್ನಮ್ಮ ಪಾರ್ಥಿವ ಶರೀರಕ್ಕೆ ದೇವೇಗೌಡರು ಮೊದಲ ಪೂಜೆ ಮಾಡಿದರು. ಪತ್ನಿ ಹಣೆಗೆ ಗೌಡರು ಕುಂಕುಮ ಇಟ್ಟು, ತಲೆಗೆ ಹೂವು ಮುಡಿಸಿದರು. ಬಳಿಕ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಪೂಜೆ ಸಲ್ಲಿಸಿದರು. ಚೆನ್ನಮ್ಮರಿಗೆ ಭಾರತದ ಬಾವುಟ ಹೊದಿಸಿ ಗೌರವ ಸಲ್ಲಿಸಲಾಯಿತು. ಅಂತಿಮ ಯಾತ್ರೆ ಹೊರಟ ವಾಹನದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಮೊಮ್ಮಕ್ಕಳು ಕುಳಿದಿದ್ದಾರೆ. ಹಾಸನ ಕಡೆಗೆ ಹೊರಟ ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು, ಅಭಿಮಾನಿಗಳು ಕಣ್ಣೀರ ವಿದಾಯ ಹೇಳಿದ್ದಾರೆ.