ಡೈಲಿವಾರ್ತೆ: 19/ಜು./2026

ಬಂಟ್ವಾಳ ಟೌನ್ ರೋಟರಿ ಕ್ಲಬ್ ರೋಟರಿ ಕ್ಲಬ್2026-27 ನೇ ಸಾಲಿನ ಪದಗ್ರಹಣ ಸಮಾರಂಭ, ನೂತನ ಅಧ್ಯಕ್ಷರಾಗಿ ಅಧ್ಯಕ್ಷ ಹಂಝ ಬಸ್ತಿಕೋಡಿ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ನೂತನ ಸಾಲಿನ ಅಧ್ಯಕ್ಷ ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಬಿ.ಎ.ಸೋಮಯಾಜಿ ಮೆಮೊರಿಯಲ್ ರೋಟರಿ ಸಭಾಂಗಣದಲ್ಲಿ ನಡೆಯಿತು.

ನಿರ್ಗಮನ‌ ಅಧ್ಯಕ್ಷ ವಚನ್ ಶೆಟ್ಟಿ ಮಾತನಾಡಿ ಎಲ್ಲಾ‌ ಸದಸ್ಯರ ಸಹಕಾರದಿಂದ ಈ ವರ್ಷವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು. ಶಾಶ್ವತ ಯೋಜನೆಗಳು ಅರ್ಹರಿಗೆ ತಲುಪಿದಾಗ ಆತ್ಮ ಸಂತೃಪ್ತಿ ಪಡೆಯಲು ಸಾಧ್ಯವಿದೆ ಎಂದರು.

ನೂತನ ಅಧ್ಯಕ್ಷರಾಗಿ ಹಂಝ ಬಸ್ತಿಕೋಡಿ, ಕಾರ್ಯದರ್ಶಿಯಾಗಿ ಮನೋಜ್ ಕನಪಾಡಿ, ಕೋಶಾಧಿಕಾರಿಯಾಗಿ ಕಿಶೋರ್ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಆಶಯ ಭಾಷಣ ಮಾಡಿದ ನೂತನ ಅಧ್ಯಕ್ಷ ಹಂಝ ಬಸ್ತಿಕೋಡಿ ಇಂದು ನನ್ನ ಜೀವನದ ಸ್ಮರಣಿಯ ಕ್ಷಣ. ಕ್ಲಬ್ ನ ದಶಮಾನೋತ್ಸವ ವರ್ಷದ ಅಧ್ಯಕ್ಷನನ್ನಾಗಿ ವಿಶ್ವಾಸವಿಟ್ಟು ಆಯ್ಕೆಗೊಳಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು. ಸಂಸ್ಥೆಯ ಗೌರವ ಹೆಚ್ಚಿಸಿ ಅಧ್ಯಕ್ಷ ಸ್ಥಾನಕ್ಕೆ ನ್ಯಾಯ ಒದಗಿಸುತ್ತೇನೆ, ಪ್ರಶಸ್ತಿಗಾಗಿ ಕೆಲಸವಲ್ಲ. ಅರ್ಹ ಫಲಾನುಭವಿಗಳನ್ನು ಸೇವೆಗಳು ತಲುಪಬೇಕೆನ್ನುವುದು ನನ್ನ ಆಸೆ. ಸದಸ್ಯರು ಹಾಗೂ ಕ್ಲಬ್ ನಡುವೆ ಸೇತುವೆಯಾಗಿ ಕೆಲಸ ಮಾಡುವದಾಗಿ ತಿಳಿಸಿದರು.

ಈ ಸಂದರ್ಭ 8 ಮಂದಿ ಹೊಸ ಸದಸ್ಯರನ್ನು ಕ್ಲಬ್ ಗೆ ಸೇರ್ಪಡೆಗೊಳಿಸಲಾಯಿತು.
ನಿರ್ಗಮನ ಅಧ್ಯಕ್ಷ ವಚನ್ ಶೆಟ್ಟಿ ದಂಪತಿ, ನಿರ್ಗಮನ ಕಾರ್ಯದರ್ಶಿ ನಾಗೇಶ್ ಎಂ. ದಂಪತಿ, ನಿಕಟಪೂರ್ವ ವಲಯ ಸೇನಾನಿ ಸುರೇಶ್ ಸಾಲ್ಯಾನ್, ನಿಕಟಪೂರ್ವ ಸಹಾಯಕ ಗವರ್ನರ್ ಜಯಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಸಮಿತಿಗೆ ಆಯ್ಕೆಯಾದ ವಚನ್ ಶೆಟ್ಟಿ ಹಾಗೂ ಕಿಶೋರ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.

ಗೃಹ ರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸೇವಾ ಕಾರ್ಯದ ಅಂಗವಾಗಿ ವೀಲ್ ಚೆಯರ್ ಹಸ್ತಾಂತರಿಸಲಾಯಿತು. ಮನೆ ನಿರ್ಮಾಣಕ್ಕೆ ಲಕ್ಷ್ಮೀ ಅವರಿಗೆ ಸಹಾಯಧನ ವಿತರಿಸಲಾಯಿತು.

ಮುಖ್ಯ ಅತಿಥಿ ಸಹಾಯಕ ಗವರ್ನರ್ ಶನ್ಫತ್ ಶರೀಫ್ ಮಾತನಾಡಿ ನಮ್ಮ ಕ್ಲಬ್ ಹಲವಾರು ಸವಾಲುಗಳನ್ನು ಎದುರಿಸಿಕೊಂಡು ದಶಮಾನೋತ್ಸವ ಸಂಭ್ರಮದತ್ತ ಹೆಜ್ಜೆ ಹಾಕುತ್ತಿದ್ದು ಸದಸ್ಯರು ಬೆನ್ನೆಲುಬಾಗಿ ನಿಂತಿದ್ದಾರೆ. ರೋಟರಿ ಜಿಲ್ಲೆ ಹಾಗೂ ಕ್ಲಬ್ ನಡುವೆ ಸೇತುವೆಯಾಗಿ ನಿಂತು ಕೆಲಸ ಮಾಡುವುದಾಗಿ ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿದಾಯ ಫೌಂಡೇಷನ್ ಅಧ್ಯಕ್ಷ ಹಾಜಿ ಮೊಹಮ್ಮದ್ ಹನೀಪ್ ಗೋಳ್ತಮಜಲು ಮಾತನಾಡಿ ಸೌಮ್ಯ, ಸರಳತೆ, ಮುಗ್ದತೆಯ ವ್ಯಕ್ತಿತ್ವ ಹೊಂದಿರುವ ಹಂಝ ಬಸ್ತಿಕೋಡಿ ರೋಟರಿಗೊಂದು ಆಸ್ತಿ. ಬಂಟ್ವಾಳ ಆಸ್ಪತ್ರೆಯ ರೋಗಿಗಳಿಗೆ ಉಚಿತ ಆಹಾರ ಕೊಡುವ ಕಾರ್ಯಕ್ರಮ ರೋಟರಿಯಿಂದ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಪದಗ್ರಹಣ ಅಧಿಕಾರಿ, ಪೂರ್ವ ಜಿಲ್ಲಾ ಗವರ್ನರ್ ವ ಎಚ್. ಆರ್. ಕೇಶವ್ ಮಾತನಾಡಿ ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಅನುಭವಿಯಾಗಿರುವ ಹಂಝ ಬಸ್ತಿಕೋಡಿಯವರು ಉತ್ತಮ ಕಾರ್ಯ ನಿರ್ವಹಿಸುತ್ತಾರೆ ಎನ್ನುವ ಭರವಸೆ ಇದೆ. ರೋಟರಿ ಸಂಸ್ಥೆ ಜಾತ್ಯಾತೀತ, ಪಕ್ಷತೀತ, ಸೀಮಾತೀತ ಸಂಘಟನೆಯಾಗಿದ್ದು ನಮ್ಮ ಸೇವೆಯನ್ನು ಸಮಾಜ ಗುರುತಿಸಿದಾಗ ರೋಟೆರಿಯನ್ ಆಗಿರುವುದಕ್ಕೆ ಸಾರ್ಥಕ ಎಂದರು.

ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ರವಿಚಂದ್ರ ಬಂಟ್ವಾಳ, ಝೋನಲ್ ಲೆಫ್ಟಿನೆಂಟ್ ಅನುರಾದ ಶೆಟ್ಟಿ ಶುಭ ಹಾರೈಸಿದರು.

ನಿರ್ಗಮನ ಅಧ್ಯಕ್ಷ ವಚನ್ ಶೆಟ್ಟಿ ಸ್ವಾಗತಿಸಿದರು, ನಿರ್ಗಮನ
ಕಾರ್ಯದರ್ಶಿ ನಾಗೇಶ್ ಎಂ. ವರದಿ ವಾಚಿಸಿದರು. ಕಾರ್ಯದರ್ಶಿ ಮನೋಜ್ ಕನಪಾಡಿ ವಂದಿಸಿದರು
ಸದಸ್ಯರಾದ ಲೋಕೇಶ್ ಸುವರ್ಣ, ಆನ್ಸ್ ಕ್ಲಬ್ ಅಧ್ಯಕ್ಷೆ ರಶ್ಮಿ ಶೆಟ್ಟಿ , ಹಾಗೂ ಸಮತಾ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.