ಡೈಲಿವಾರ್ತೆ: 22/ಜು./2026

ಮಾಣಿ : ಗೃಹಜ್ಯೋತಿ ಯೋಜನೆಯ ಪರಿಷ್ಕರಣಾ ಶಿಬಿರ

ಬಂಟ್ವಾಳ : ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯ ಪರಿಷ್ಕರಣಾ ಶಿಬಿರವು ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ 174ನೇ ವಾರ್ಡಿನ ಶಂಭುಗ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

  ಕಲ್ಮಡ್ಕ ಮೆಸ್ಕಾಂ ವ್ಯಾಪ್ತಿಗೆ ಬರುವ ಶಂಭುಗ, ಪಲ್ಲತ್ತಿಲ, ಸೂರಿಕುಮೇರು, ನೆಲ್ಲಿ ಪ್ರದೇಶದ ಹಲವು ಮಂದಿ

ಗ್ರಾಹಕರು ಆಗಮಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

 ಕಲ್ಲಡ್ಕ ವಿಭಾಗದ ಮೆಸ್ಕಾಂ ನಿರ್ವಾಹಕ ಲವ ಕುಮಾರ್ ಮತ್ತು ಹರೀಶ್ ಪರಿಷ್ಕರಣಾ ಕಾರ್ಯ ನಡೆಸಿದರು.  ಮೆಸ್ಕಾಂ ಕಲ್ಮಡ್ಕ ಶಾಖೆಯ ಅಭಿಯಂತ ಮಹಾಬಲ ಅವರು ಶಿಬಿರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಜಯಂತಿ ಪೂಜಾರಿ, ಮಾಣಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಭಾಗವಹಿಸಿದ್ದರು.

ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಮಾಜಿ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸುಜಾತ ಶಿಬಿರವನ್ನು ಸಂಯೋಜಿಸಿದ್ದರು.
ಅಂಗನವಾಡಿ ಶಿಕ್ಷಕಿ ಆಶಾಲತಾ ಮತ್ತು ಸಹಾಯಕಿ ಸ್ವಾತಿ ಸಹಕರಿಸಿದರು.