


ಡೈಲಿವಾರ್ತೆ:17/ಸೆ./2026

ಗ್ರಾಹಕರೇ ಹುಷಾರ್.! ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ವಿತರಣೆಯಲ್ಲಿ ಬಾರೀ ಲೋಪ: 85% ನಳಿಕೆಗಳಲ್ಲಿ ಪೂರೈಕೆ ಕೊರತೆ!

ಬೆಂಗಳೂರು: ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಾಗುತ್ತಿರುವ ಆತಂಕಕಾರಿ ಸಂಗತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸಿದ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.
ಸತತ ಎಂಟು ದಿನಗಳ ಕಾಲ ನಡೆದ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ ರಾಜ್ಯದ 805 ಪೆಟ್ರೋಲ್ ಬಂಕ್‌ಗಳನ್ನು ಪರಿಶೀಲಿಸಲಾಗಿದ್ದು, 3,071 ಇಂಧನ ವಿತರಣಾ ನಳಿಕೆಗಳ ಪೈಕಿ 2,618 ನಳಿಕೆಗಳಲ್ಲಿ (ಶೇ.85.24) ಇಂಧನ ಪೂರೈಕೆಯಲ್ಲಿ ಕೊರತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಬಂಕ್‌ಗಳ ಇಂಧನ ವಿತರಣಾ ಯಂತ್ರಗಳನ್ನು ಮರುಹೊಂದಿಸುವ (Recalibration) ಅಗತ್ಯವಿರುವುದು ಪತ್ತೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್, ಪತ್ತೆಯಾದ ಕೊರತೆಯಲ್ಲಿ ಕೇಂದ್ರ ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ಅನುಮತಿಸಲಾದ ಮಿತಿಯೊಳಗಿನ ಕೊರತೆ ಹಾಗೂ ನಿಗದಿತ ಮಿತಿಯನ್ನು ಮೀರಿದ ಕೊರತೆ ಎರಡೂ ಸೇರಿವೆ ಎಂದು ತಿಳಿಸಿದರು.
ನಿಗದಿತ ಮಿತಿಯನ್ನು ಮೀರಿಸಿ ಕಡಿಮೆ ಪ್ರಮಾಣದಲ್ಲಿ ಇಂಧನ ಪೂರೈಸಿರುವ ಬಂಕ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಒಟ್ಟು ₹6.6 ಲಕ್ಷ ದಂಡ ವಿಧಿಸಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ 5,946 ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ತಪಾಸಣೆಗೊಳಗಾದ 805 ಬಂಕ್‌ಗಳಲ್ಲಿ ಇಷ್ಟೊಂದು ಪ್ರಮಾಣದ ನಳಿಕೆಗಳಲ್ಲಿ ಕೊರತೆ ಕಂಡುಬಂದಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಉಳಿದ ಬಂಕ್‌ಗಳಲ್ಲಿಯೂ ಇದೇ ರೀತಿಯ ಅಕ್ರಮಗಳಿವೆಯೇ ಎಂಬುದನ್ನು ಪರಿಶೀಲಿಸಲು ಮುಂದಿನ ಹಂತದಲ್ಲಿ ವ್ಯಾಪಕ ತಪಾಸಣೆ ನಡೆಸುವ ಅಗತ್ಯ ಎದುರಾಗಿದೆ.