


ಡೈಲಿವಾರ್ತೆ:22/ಸೆ./2026

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕರ್ನಾಟಕದ ಕೀರ್ತಿ: ಸಾಲಿಗ್ರಾಮದ ಕೀರ್ತನಾ ನಾಗೇಂದ್ರಗೆ ಬೆಳ್ಳಿ ಪದಕ

ಇಸ್ತಾಂಬುಲ್‌ನಲ್ಲಿ ಸೆ.22ರಂದು ನಡೆದ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಕೀರ್ತನಾ ನಾಗೇಂದ್ರ ಅವರು U84 ಓಪನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದ ಕೀರ್ತನಾ ಅವರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮದ ‘ರಾ ಫಿಟ್ನೆಸ್ ಜಿಮ್’ನ ಸದಸ್ಯೆಯಾಗಿರುವ ಕೀರ್ತನಾ ನಾಗೇಂದ್ರ ಅವರು, ಜಿಮ್‌ನ ಮಾಲಕರು ಹಾಗೂ ಪವರ್‌ಲಿಫ್ಟಿಂಗ್‌ನ ಪ್ರಮುಖ ತರಬೇತುದಾರರಾದ ಮಹೇಶ್ ದೇವಾಡಿಗ ಮತ್ತು ರೋಷನ್ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.
ನಿರಂತರ ಅಭ್ಯಾಸ, ಕಠಿಣ ತರಬೇತಿ ಹಾಗೂ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗಳಿಸಿರುವ ಕೀರ್ತನಾ ಅವರ ಸಾಧನೆಗೆ ರಾ ಫಿಟ್ನೆಸ್ ಜಿಮ್‌ನ ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.