


ಡೈಲಿವಾರ್ತೆ:26/ಸೆ./2026

ಹೊನ್ನಾಳ: ದರ್ಗಾ ಝೀಯಾರತ್, ಧ್ವಜಾರೋಹಣದೊಂದಿಗೆ ಉರುಸ್‌ಗೆ ಚಾಲನೆ

ಬ್ರಹ್ಮಾವರ: ಹೊನ್ನಾಳದ ಹಝ್ರತೇ ಹಾಜಾನಿಮ್ ರಹಮತುಲ್ಲಾಹಿ ಅಲೈಹಾ ದರ್ಗಾ ಶರೀಫ್‌ನ ವಾರ್ಷಿಕ ಉರುಸ್ ಮುಬಾರಕ್ ಕಾರ್ಯಕ್ರಮಗಳಿಗೆ ದರ್ಗಾ ಝೀಯಾರತ್ ಹಾಗೂ ಧ್ವಜಾರೋಹಣದೊಂದಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಜಾಮಿಯಾ ಮಸೀದಿ ಹೊನ್ನಾಳದ ಖತೀಬರಾದ ಮೌಲಾನ ಮೊಹಮ್ಮದ್ ಅಲಿ ಬರಕಾತಿಯವರು ದರ್ಗಾ ಝೀಯಾರತ್‌ಗೆ ನೇತೃತ್ವ ವಹಿಸಿದರು. ಬಳಿಕ ಉರುಸ್ ಸಮಿತಿ ಅಧ್ಯಕ್ಷ ಬಿ.ಎಸ್. ಸುಭಾನ್ ಅವರು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಸೀದಿಯ ನಾಯಬ್ ಖತೀಬ್ ಮೌಲಾನ ಅಬ್ದುಲ್ ನಾಸಿರ್ ರಜಾ, ಮದ್ರಸಾ ಮೊಹಮ್ಮದಿಯ ಮುದರ್ರಿಸ್ ಮೌಲಾನ ತೌಕೀರ್ ಅಮಾನಿ, ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಭಾಷಾ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಖತ್ತಾಬ್, ಗೌರವಾಧ್ಯಕ್ಷ ಮೊಹಮ್ಮದ್ ರಫೀಕ್ ಬಿ., ಮದ್ರಸಾ ಅಧ್ಯಕ್ಷ ಮೊಹಮ್ಮದ್ ರಫೀಕ್ ಎಂ., ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಮ್ತಿಯಾಜ್, SSF ಅಧ್ಯಕ್ಷ ಶೇರಾಜ್ ಹೊನ್ನಾಳ, ಜಮಾತಿನ ಹಿರಿಯರಾದ ಬಿ.ಆರ್. ಬಾಷಾ ಸಾಹೇಬ್ ಸೇರಿದಂತೆ ಜಮಾತಿನ ಪ್ರಮುಖರು ಉಪಸ್ಥಿತರಿದ್ದರು.

ಸೆ.26ರಂದು ಧಾರ್ಮಿಕ ಕಾರ್ಯಕ್ರಮ:
ಉರುಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ. ಮುಷ್ತಾಕ್ ಅಹಮದ್ ಮಾತನಾಡಿ, ಸೆ.26ರ ಭಾನುವಾರ ಮಗ್ರಿಬ್ ನಮಾಜಿನ ಬಳಿಕ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜಸ್ಥಾನದ ಅಲ್ಲಾಮ ಮೌಲಾನ ಶಂಸುದ್ದೀನ್ ಖಾದ್ರಿ ಉರ್ದುವಿನಲ್ಲಿ ಹಾಗೂ ಅಲ್ಲಾಮ ಮೌಲಾನ ಸಾಧಿಕ್ ಮೋಯಿನಿ ಕನ್ನಡದಲ್ಲಿ ಪ್ರವಚನ ನೀಡಲಿದ್ದಾರೆ. ಅಸಯ್ಯದ್ ಜಾಫರ್ ಅಸ್ಸಖಾಫ್ ತಂಗಳ್ ಕೋಟೇಶ್ವರ ಅವರು ದುವಾ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವಾರು ಸಾದಾತ್‌ಗಳು, ವಿವಿಧ ಊರುಗಳ ಮಸೀದಿಗಳ ಇಮಾಮರು ಹಾಗೂ ಜಮಾತಿನ ಪ್ರಮುಖರು ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲೆ ಸೇರಿದಂತೆ ಆಸುಪಾಸಿನ ಜಿಲ್ಲೆಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸೆ.27ರಂದು ಬೃಹತ್ ಸಂದಲ್ ರ್‍ಯಾಲಿ: ಸೆ.27ರ ಭಾನುವಾರ ಬೆಳಗ್ಗೆ 9 ಗಂಟೆಗೆ ಬೃಹತ್ ಸಂದಲ್ ರ್ಯಾಲಿ ನಡೆಯಲಿದೆ. ಬಳಿಕ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಸಾರ್ವಜನಿಕ ಊಟೋಪಚಾರದ ವ್ಯವಸ್ಥೆ ಇರಲಿದೆ. ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಮುಖಂಡರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.
ಉರುಸ್‌ನ ಎಲ್ಲ ಕಾರ್ಯಕ್ರಮಗಳಿಗೆ ಸರ್ವಧರ್ಮೀಯ ಬಂಧುಗಳನ್ನು ಆದರಪೂರ್ವಕವಾಗಿ ಸ್ವಾಗತಿಸುವುದಾಗಿ ಉರುಸ್ ಸಮಿತಿ ತಿಳಿಸಿದೆ.