


ಡೈಲಿವಾರ್ತೆ:01/ಅ./2026

ಸರಕಾರಿ ಪ್ರೌಢಶಾಲೆ ಗುಂಡ್ಮಿ: ಸ್ವಾಸ್ಥ್ಯ ಸಂಕಲ್ಪ – ಮಾದಕ ದ್ರವ್ಯ ವಿರೋಧಿ ಶಿಬಿರ

ಸಾಸ್ತಾನ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಪ್ರವತಿ೯ತ ಸರಕಾರೀ ಪ್ರೌಢಶಾಲೆ ಗುಂಡ್ಮಿ ಇಲ್ಲಿನ ಇಂಟ್ರ್ಯಾಕ್ಟ್ ಕ್ಲಬ್, ಇಕೋ ಕ್ಲಬ್, ಮಕ್ಕಳ ಹಕ್ಕುಗಳ ಜಾಗೃತಿ ಕ್ಲಬ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬ್ರಹ್ಮಾವರ ಇವರ ಸಹಯೋಗದೊಂದಿಗೆ ವೈಯಕ್ತಿಕ ಆರೋಗ್ಯ ಹಾಗೂ ಮಾದಕ ದ್ರವ್ಯ ದುಷ್ಪರಿಣಾಮ ಶಿಬಿರವನ್ನು ಶ್ರೀ ನವೀನ್ ಅಮೀನ್ ಉದ್ಘಾಟಿಸಿದರು.
ಹಂಗಾರಕಟ್ಟೆ ಸಾಸ್ತಾನ ರೋಟರಿ ಅಧ್ಯಕ್ಷೆ
ರೊ ಕುಸುಮಾ ಮನೋಜ್
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಜಾತ, ಶಿಕ್ಷಣ ತಜ್ಞ ಶ್ರೀ ಜಿ ಗಣೇಶ್, ಜಿಲ್ಲಾ ಜನ ಜಾಗೃತಿ ಸಮಿತಿ ಅಧ್ಯಕ್ಷರು,
ರೊ. ಸುಲತಾ ಎಸ್ ಹೆಗ್ಡೆ,
ರೊ. ಮನೋಜ್ ಕುಮಾರ್, ಇಂಟ್ರ್ಯಾಕ್ಟ್ ಮತ್ತು ರೋಟರಿ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಶ್ರೀ ಸತೀಶ ಐತಾಳ ಸ್ವಾಗತಿಸಿ, ವಂದಿಸಿದರು