ಡೈಲಿವಾರ್ತೆ:01/ಅ./2026

ಸಂಘಟನೆ–ಸಮಾಜ ಸೇವೆಯ ಗಣನೀಯ ಕೊಡುಗೆ: ಸಿ.ಎಸ್. ಷಡಾಕ್ಷರಿಗೆ ‘ಬಸವ ಪುರಸ್ಕಾರ–2026’

ಲಕ್ಷ್ಮೇಶ್ವರ: ಸಂಘಟನೆ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ನಿಸ್ವಾರ್ಥ ಸೇವೆ, ಬದ್ಧತೆ ಮತ್ತು ಗಣನೀಯ ಕೊಡುಗೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರಿಗೆ ‘ಬಸವ ಪುರಸ್ಕಾರ–2026’ ಪ್ರಶಸ್ತಿ ಲಭಿಸಿದೆ.
ಬಸವ ಪರಿಷತ್ ಬಳಗದ ವತಿಯಿಂದ ನೀಡಲಾಗುವ ಈ ಗೌರವಕ್ಕೆ ಷಡಾಕ್ಷರಿ ಅವರು ಭಾಜನರಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಸರ್ಕಾರಿ ನೌಕರರ ಹಿತಾಸಕ್ತಿ ಹಾಗೂ ಸಂಘಟನೆಯ ಬಲವರ್ಧನೆಗೆ ಅವರು ಸಲ್ಲಿಸಿರುವ ಸೇವೆ ಮತ್ತು ನೌಕರರ ಸಮಷ್ಟಿ ವಿಕಾಸದ ದೃಷ್ಟಿಕೋನವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ಉಪಾಧ್ಯಕ್ಷ ಹಾಗೂ ಗದಗ ಜಿಲ್ಲಾ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ಗುರುರಾಜ ಹವಳದ, ಪ್ರಧಾನ ಕಾರ್ಯದರ್ಶಿ ಎಂ.ಎ. ನದಾಫ್, ಖಜಾಂಚಿ ಎಂ.ಡಿ. ವಾರದ, ರಾಜ್ಯ ಪರಿಷತ್ ಸದಸ್ಯರಾದ ಎ.ಬಿ. ಗೌಡರ, ಬಸವರಾಜ ಯರಗುಪ್ಪಿ, ಎ.ಎಂ. ಅಕ್ಕಿ, ಜಿಲ್ಲಾ ನಾಮನಿರ್ದೇಶಿತ ಸದಸ್ಯರಾದ ಎಲ್.ಎನ್. ನಂದೆಣ್ಣವರ, ಎಂ.ಎಸ್. ಹಿರೇಮಠ ಸೇರಿದಂತೆ ಸಂಘದ ಪದಾಧಿಕಾರಿಗಳು ಷಡಾಕ್ಷರಿ ಅವರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದರು.