ಡೈಲಿವಾರ್ತೆ:02/ಅ./2026

ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ಮಹಾತ್ಮ ಗಾಂಧಿಜೀ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಆಚರಣೆ

ಬೆಂಗಳೂರು: ಅ.02: ನಗರದ ಮಹಾರಾಣಿ ಕ್ಲಸ್ಟ‌ರ್ ವಿಶ್ವವಿದ್ಯಾಲಯ ವತಿಯಿಂದ ವಿವಿಯ ಆಡಳಿತ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಯವರ 157 ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ
ಯವರ 122ನೇ ಜಯಂತಿಯನ್ನು ಆಚರಿಸಲಾಯಿತು.

ಇದೇ ಸಮಯದಲ್ಲಿ ಕುಲಪತಿ ಡಾ. ಮಮತಾ ಬಿ, ಕುಲಸಚಿವೆ ಶ್ರೀಮತಿ ಸೀಮಾ ಬಿ. ನಾಯಕ್, ಮೌಲ್ಯಮಾಪನ ಕುಲಸಚಿವ ಪ್ರೊ. ವೈ. ರಮೇಶ್, ವಿತ್ತಾಧಿಕಾರಿ ಎಂ.ಎಸ್. ಚೇತನ್ ಕುಮಾರ್, ಉಪ ಕುಲಸಚಿವರಾದ ಪ್ರೊ. ಎಲ್.ಎಚ್. ಶಿವಶಂಕರಪ್ಪ, ಶ್ರೀನಾಥ್ ರಾಜ್, ಪ್ರೊ. ಎಲ್.ಜಿ. ಮೀರಾ, ಇತಿಹಾಸ ವಿಭಾಗದ ಅಧ್ಯಕ್ಷರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರು ಡಾ. ಶಾಹೀನಾ ಬಾನೋ, ವ್ಯವಸ್ಥಾಪಕ ರಾಘವೇಂದ್ರ, ವಿವಿಧ ಶಾಲೆಯ ನಿರ್ದೇಶಕರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ವಿವಿಧ ವಿಷಯಗಳ ಉಪನ್ಯಾಸಕರು ಹಾಗೂ ಎನ್ಎಸ್ಎಸ್ ಸ್ವಯಂ ಸೇವಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.