ಡೈಲಿವಾರ್ತೆ:02/ಅ./2026

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜಿನಾಮೆಗೆ ಆಗ್ರಹಿಸಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ವತಿಯಿಂದ ಪ್ರತಿಭಟನೆ

ಬಂಟ್ವಾಳ : ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜಿನಾಮೆ ನೀಡಬೇಕು,
ಭಾರತ ಚುನಾವಣಾ ಆಯೋಗದ ಸ್ವಾಯತ್ತತೆ ರಕ್ಷಿಸಿ
ಎಸ್.ಐ.ಆರ್ ನಿಲ್ಲಿಸಿ, ಕೈ ಬಿಟ್ಟ ಮತದಾರರನ್ನು ಪುನಃ ಸೇರಿಸಿ,
ಮುಖ್ಯ ಚುನಾವಣಾ ಆಯುಕ್ತರ
ನೇಮಕ ಪ್ರಕ್ರಿಯೆ ಬದಲಾಗಬೇಕು ಎಂದು ಒತ್ತಾಯಿಸಿ ದೇಶದಾದ್ಯಂತ ಎಡ ಪಕ್ಷಗಳು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ
ಭಾರತ ಕಮ್ಯೂನಿಸ್ಟ್‌ ಪಕ್ಷ ( ಮಾರ್ಕ್ಸ್ ವಾದಿ,ಲೆನಿನ್ ವಾದಿ) ಲಿಬರೇಶನ್. ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಇಂದು ಬಿಸಿ ರೋಡ್ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ ಎಸ್.ಐ.ಆರ್ ಪ್ರಕ್ರಿಯೆಯು ಅವೈಜ್ಞಾನಿಕ ವಾಗಿದ್ದು ದಾಖಲಾತಿಯ ಹೆಸರಿನಲ್ಲಿ ಬಡವರನ್ನು , ದಲಿತ, ಆದಿವಾಸಿ ಅಲ್ಪಸಂಖ್ಯಾತರನ್ನು ಚುನಾವಣಾ ಪ್ರಕ್ರಿಯಿಂದಲೇ ದೂರ ಮಾಡುವ ಕೇಂದ್ರ ಸರಕಾರದ ಒಂದು ಷಡ್ಯಂತ್ರ ಎಂದು ಆರೋಪಿಸಿದರು.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಮೇಲೆ ಈಗಾಗಲೇ ಕೇರಳದಲ್ಲಿ ಪ್ರಕರಣ ವಿದ್ದು ಈ ವ್ಯಕ್ತಿ ಕೇಂದ್ರ ಮೋದಿ ಸರಕಾರದ ಏಜೆಂಟರಾಗಿ ವರ್ತಿಸಿದ್ದು ಈತನನ್ನು ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಸಿ.ಪಿ‌.ಐ.ಎಂ.ಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ.ಇ ಮಾತನಾಡಿ
ಎಸ್.ಐ.ಆರ್ ವಿರುದ್ಧ ಇಂದು ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟಗಳು ನಡೆಯುತಗತಿದ್ದರೂ ಕೇಂದ್ರ ಸರಕಾರ ಮೌನವಾಗಿದ್ದು, ಬಿ.ಜೆ.ಪಿ ಯನ್ನು ಅಧಿಕಾರಕ್ಕೆ ತರಲು ಅವರಿಗೆ ಬೇಕಾದ ರೀತಿಯಲ್ಲಿ ಎಸ್.ಐ.ಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಆರ್.ವೈ.ಎ ರಾಜ್ಯ ಸಹ ಸಂಚಾಲಕ ಮಹಮ್ಮದ್ ಲುಕ್ಮಾನ್ ಕೆ.ಎಂ ಮಾತನಾಡಿ ಎಸ್.ಐ.ಆರ್ ಪ್ರಕ್ರಿಯೆಯು ಸಂಪೂರ್ಣ ವಾಗಿ ಅಸಮರ್ಪಕವಾಗಿ ನಡೆದಿದ್ದು, ಸ್ವತಂತ್ರವಾಗಿ ಕಾರ್ಯಚರಿಸಬೇಕಿದ್ದ ಚುನಾವಣಾ ಆಯೋಗ ಕೇಂದ್ರ ಸರಕಾರದ ಕೈ ಗೊಂಬೆಯಾಗಿ ವರ್ತಿಸುತ್ತಿರುವಂತದ್ದು ಭಾರತದ ಪ್ರಜಾಪ್ರಭುತ್ವ ಕ್ಕೆ ಅವಮಾನಕರವಾದ ಸಂಗತಿ ಆಗಿದೆ. ಇಂದು ಎಸ್.ಐ.ಆರ್ ವಿರುದ್ದ ದೆಹಲಿಯಲ್ಲಿ ವಿದ್ಯಾರ್ಥಿ ಯುವಜನ ಸಂಘಟನೆಗಳಿಂದ ದೊಡ್ಡ ಪ್ರತಿಭಟನೆ ನಡೆಯುತ್ತಿದ್ದು , ಇದನ್ನು ಪೋಲೀಸ್ ಬಲ ಪ್ರಯೋಗದ ಮೂಲಕ ಹತ್ತಿಕ್ಕಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಸರಕಾರದ ಈ ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ದೇಶದಾದಾದ್ಯಂತ ಪ್ರಬಲ ಹೋರಾಟ ಮೂಡಿಬರಲಿದೆ, ಎಸ್.ಐ.ಆರ್ ಪ್ರಕ್ರಿಯೆ ರದ್ದಾಗಿ
ಗ್ಯಾನೇಶ್ ಕುಮಾರ್ ರಾಜಿನಾಮೆ ನೀಡುವ ವರೆಗೆ ಹೋರಾಟವನ್ನು ತೀವ್ರ ಗೊಳಿಸಬೇಕೆಂದು ಕರೆ ನೀಡಿದರು.

ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ .ಆರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಪಿ.ಐ.ಎಂ.ಎಲ್ ನ ಜಿಲ್ಲಾ ಸಮಿತಿ ಸದಸ್ಯರಾದ ಸಜೇಶ್ ವಿಟ್ಲ, ಮಹಮ್ಮದ್ ಮುಂಝಿರ್, ಸುಹೈಲ್, ತಾಲೂಕು ಸಮಿತಿ ಸದಸ್ಯರಾದ ಡೆನ್ನಿಸ್ ಡಿ.ಸೋಜ, ವಸಂತ ಗಟ್ಟಿ, ಜಾನ್ ಡಿ ಸೋಜ , ಮಹಮ್ಮದ್ ಹಪೀಝ್ ಎ.ಕೆ, ರಾಜೇಶ್ ಶೆಟ್ಟಿ, ಕುಂಞಪ್ಪ ಮೂಲ್ಯ, ಎ.ಐ.ಸಿ.ಸಿ.ಟಿ.ಯು ಮುಖಂಡರಾದ ಶೌಕತ್ ಆಲಿ ಖಾನ್, ಅಚ್ಯುತ ಕಟ್ಟೆ, ಮಾರ್ಟಿನ್ ಬಂಟ್ವಾಳ
ಮುಂತಾದವರು ಪ್ರತಿಭಟನೆಯ ನೇತೃತ್ ವವಹಿಸಿದ್ದರು.