


ಡೈಲಿವಾರ್ತೆ:02/ಅ./2026

ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆ: ಚೇತನಾ ಶಾಲೆಗೆ ರೋಟರಿ ಕ್ಲಬ್‌ನಿಂದ ಸೀಲಿಂಗ್ ಫ್ಯಾನ್ ಕೊಡುಗೆ

ಸಾಸ್ತಾನ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಮತ್ತು ಇಂಟ್ರ್ಯಾಕ್ಟ್ ಕ್ಲಬ್ ಚೇತನಾ ಪ್ರೌಢಶಾಲೆ ಹಂಗಾರಕಟ್ಟೆ ಸಹಭಾಗಿತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ವತಿಯಿಂದ ಚೇತನಾ ಪ್ರೌಢಶಾಲೆಗೆ ಸೀಲಿಂಗ್ ಫ್ಯಾನ್‌ನ್ನು ಕೊಡುಗೆಯಾಗಿ ನೀಡಲಾಯಿತು. ಶಿಕ್ಷಣ ಸಂಸ್ಥೆಯ ಅಗತ್ಯಕ್ಕೆ ಸ್ಪಂದಿಸುವ ಮೂಲಕ ಸಾಮಾಜಿಕ ಸೇವೆಯ ಸಂದೇಶವನ್ನು ಸಾರಲಾಯಿತು.
ರೋಟರಿ ಅಧ್ಯಕ್ಷೆ ರೊ. ಕುಸುಮಾ ಮನೋಜ್, ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ, ರೊ. ಅರವಿಂದ ಶರ್ಮ, ರೊ. ಸುಲತಾ ಎಸ್. ಹೆಗ್ಡೆ, ರೊ. ಲೀಲಾವತಿ ಗಂಗಾಧರ, ರೊ. ಮಮತಾ ಶೆಟ್ಟಿ, ರೊ. ನೈನಾ ಜೆ. ಶೆಟ್ಟಿ, ರೊ. ಗಣೇಶ್ ಜಿ., ರೊ. ಮನೋಜ್ ಕುಮಾರ್, ಶಿಕ್ಷಕ ವೃಂದ ಹಾಗೂ ಇಂಟ್ರ್ಯಾಕ್ಟ್ ಸದಸ್ಯರು ಉಪಸ್ಥಿತರಿದ್ದರು.