ಡೈಲಿವಾರ್ತೆ:05/ಅ./2026

ಬಂಟ್ವಾಳ :ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸನ್ಮಾನ

ಬಂಟ್ವಾಳ : ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಬಿ.ಸಿ.ರೋಡ್‌ನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಮಂಗಳೂರು ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ ಬಿ.ಎಂ. ತಾಜುದ್ದೀನ್ ಉಬೈದ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯನ್ನು ಒಂದು ಅಪೂರ್ವ ಅವಕಾಶ ಎಂಬ ನೆಲೆಯಲ್ಲಿ ಪರಿಗಣಿಸಿ ಸಭ್ಯ‌ ನಾಗರಿಕ ಬದುಕಿನ‌ ಪಥದಲ್ಲಿ ವಿಚಲಿತರಾಗದೆ ಸಾಗಿದರೆ ಯಶಸ್ಸು ಖಚಿತ ಎಂದು ಅಭಿಪ್ರಾಯಪಟ್ಟರು.

ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾ ಕೋಶಾಧಿಕಾರಿ ಅಬ್ದುನ್ನಾಸಿರ್ ಕೆ.ಕೆ., ಬಂಟ್ವಾಳ ಘಟಕದ ಅಜೀವ ಸದಸ್ಯರಾದ
ಹಾಜಿ ಅಬ್ದುಲ್ ರಝಾಕ್ ಗೋಳ್ತಮಜಲು, ಮೊಹಮ್ಮದ್ ಹನೀಫ್ ಟಿ.ಎಚ್.ಎಂ.ಎ. ಅತಿಥಿಗಳಾಗಿ ಭಾಗವಹಿಸಿದ್ದರು.

ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು.

ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ
ಅಜೀವ ಸದಸ್ಯರಾದ ಹಾಜಿ ಬಿ.ಎ. ಮಹಮ್ಮದ್ ಬಂಟ್ವಾಳ,
ಪಿ. ಮಹಮ್ಮದ್ ಪಾಣೆಮಂಗಳೂರು, ಎನ್. ಮಹಮ್ಮದ್ ನಾರಂಕೋಡಿ, ವಿ.ಎಚ್.ಅಶ್ರಫ್ ವಿಟ್ಲ, ಅಹ್ಮದ್ ಮುಸ್ತಫಾ ಗೋಳ್ತಮಜಲು, ಶಾಕಿರ್ ಅಳಕೆಮಜಲು, ಇಸುಬು ಹಾಜಿ ಕಡಂಬು, ಬಶೀರ್ ವಗ್ಗ, ಇಬ್ರಾಹಿಂ ಮೊಯ್ದಿನ್ ನಂದಾವರ ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ, ಉಪ್ಪಿನಂಗಡಿ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ, ಇಬ್ರಾಹಿಂ ಎಂ. ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಮೊಡಂಕಾಪು ಕಾರ್ಮೆಲ್ ಪ್ರೌಢ ಶಾಲೆಯ ಸಹ ಶಿಕ್ಷಕ ರೋಶನ್ ಅಲೆಕ್ಸಾಂಡರ್ ಪಿಂಟೋ ಇವರನ್ನು ಸನ್ಮಾನಿಸಲಾಯಿತು. ಹಾಗೂ ತಾಲೂಕಿನ ಆಯ್ದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ವಿದ್ಯಾರ್ಥಿ ವೇತನದ ಫಲಾನುಭವಿಗಳ ಪಟ್ಟಿ ವಾಚಿಸಿದರು. ಕೆ.ಎಸ್. ಮುಹಮ್ಮದ್ ಕಡೇಶ್ವಾಲ್ಯ ಕಿರಾಅತ್‌ ಪಠಿಸಿದರು. ಬಿ.ಎಂ. ತುಂಬೆ ಪ್ರಸ್ತಾವನೆಗೈದರು.
ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ಸ್ವಾಗತಿಸಿ, ಉಪಾಧ್ಯಕ್ಷ ಶೇಖ್ ರಹ್ಮತುಲ್ಲಾ ವಂದಿಸಿದರು, ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.