




ಡೈಲಿವಾರ್ತೆ:24/ಅ./2026

ಕಲಾ ಪ್ರತಿಭೆಗೆ ಗಡಿನಾಡಿನ ಗೌರವ: ಕೋಟ ವಿವೇಕ ಶಾಲೆಯ ಪ್ರೇರಣಾ, ಸಾನ್ವಿಗೆ ಕಲಾಶ್ರೀ ಪ್ರಶಸ್ತಿ

ಕೋಟ: ಗಡಿನಾಡ ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.), ಕಾಸರಗೋಡು, ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2026 ಹಾಗೂ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಮತ್ತು ಕನ್ನಡ ಭವನ ಪ್ರಕಾಶನದ ವತಿಯಿಂದ ಪ್ರದಾನ ಮಾಡಲಾಗುವ ಕಲಾಶ್ರೀ ಪ್ರಶಸ್ತಿಗೆ ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯರಾದ ಪ್ರೇರಣಾ ಹಾಗೂ ಸಾನ್ವಿ ಆಯ್ಕೆಯಾಗಿದ್ದಾರೆ.

ಇಬ್ಬರೂ ನವರಾತ್ರಿ ಉತ್ಸವದ 8ನೇ ದಿನ ಕಾಸರಗೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.


ಮಣೂರು ಪಡುಕೆರೆಯ ನಾಗೇಶ್ ಮತ್ತು ಪ್ರೇಮ ದಂಪತಿಯ ಪುತ್ರಿ ಪ್ರೇರಣಾ ಹಾಗೂ ಪಾರಂಪಳ್ಳಿಯ ನಾಗರಾಜ್ ಮತ್ತು ಸರಸ್ವತಿ ದಂಪತಿಯ ಪುತ್ರಿ ಸಾನ್ವಿ ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿನಿಯರ ಕಲಾ ಪ್ರತಿಭೆಗೆ ದೊರೆತ ಈ ಗೌರವವು ಶಾಲೆ ಹಾಗೂ ಊರಿನ ಹೆಮ್ಮೆಗೆ ಪಾತ್ರವಾಗಿದ್ದು, ಅವರ ಮುಂದಿನ ಸಾಧನೆಗಳಿಗೆ ಎಲ್ಲರೂ ಶುಭ ಹಾರೈಸಿದ್ದಾರೆ.