ಡೈಲಿವಾರ್ತೆ:29/ಅ./2026

ಮಿತ್ತಬೈಲ್ : ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಶಾಂತಿಅಂಗಡಿ ಆಯ್ಕೆ.

ಬಂಟ್ವಾಳ : ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಶಾಂತಿಅಂಗಡಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಮಸೀದಿಯ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು , ಎನ್ ಮುಹಮ್ಮದ್ ಇಕ್ಬಾಲ್ ನಂದರಬೆಟ್ಟು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮಿತ್ತಬೈಲ್ ಮಸೀದಿ ಖತೀಬ್ ಸಯ್ಯಿದ್ ಬಾಶಿತ್ ಬಅಲವಿ ತಂಙಳ್ ಅವರು ದುಹಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಅಕ್ಬರ್ ಆಲಿ 2025-26 ನೇ ಸಾಲಿನ ವರದಿ ವಾಚಿಸಿ, ಲೆಕ್ಕ ಪತ್ರವನ್ನು ಮಂಡಿಸಿದರು. ಬಶೀರ್ ಮಜಲ್ ಸ್ವಾಗತಿಸಿ, ಅಶ್ರಫ್ ಶಾಂತಿಅಂಗಡಿ ವಂದಿಸಿದರು.

ನೂತನ ಪದಾಧಿಕಾರಿಗಳು.

ನೂತನ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಶಾಂತಿಅಂಗಡಿ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಕೆಳಗಿನ ಮಿತ್ತಬೈಲ್, ಅಬ್ದುಲ್ ಹಮೀದ್ ಕೊಡಂಗೆ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ಆಲಿ ಪೊನ್ನೋಡಿ, ಕಾರ್ಯದರ್ಶಿಗಳಾಗಿ ಆದಂ ಪಲ್ಲ, ಎನ್ ಮುಹಮ್ಮದ್ ಇಕ್ಬಾಲ್ ನಂದರಬೆಟ್ಟು, ಕೋಶಾಧಿಕಾರಿಯಾಗಿ ಮುಹಮ್ಮದ್ ಶಾಫಿ ಕೈಕಂಬ, ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಅಶ್ರಫ್ ಶಾಂತಿಅಂಗಡಿ ಯವರನ್ನು ಆಯ್ಕೆ ಮಾಡಲಾಯಿತು ಹಾಗೂ ಕಾರ್ಯಕಾರಿ ಸಮಿತಿಗೆ 12 ಮಂದಿ ಸದಸ್ಯರನ್ನು ಆರಿಸಲಾಯಿತು.