ಡೈಲಿವಾರ್ತೆ:29/ಅ./2026

ಬಂಟ್ವಾಳ: ಅಲ್ಪಕಾಲದ ಅನಾರೋಗ್ಯದಿಂದ ಮಹಮ್ಮದ್ ಅಝ್ಮಲ್ ನಿಧನ

ಬಂಟ್ವಾಳ, ಅ. 29: ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ಗೂಡಿನಬಳಿ ನಿವಾಸಿ, ಆಟೋ ರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ಅವರ ಪುತ್ರ ಮಹಮ್ಮದ್ ಅಝ್ಮಲ್ (25) ಅವರು ಅಲ್ಪಕಾಲದ ಅನಾರೋಗ್ಯದಿಂದ ಅ. 29ರಂದು ನಿಧನರಾದರು.

ಗುರುವಾರ ಬೆಳಿಗ್ಗೆ ಹಠಾತ್ ಅನಾರೋಗ್ಯಕ್ಕೀಡಾದ ಅಝ್ಮಲ್ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಮೃತ ಅಝ್ಮಲ್ ಅವರು ಇಬ್ಬರು ಮಕ್ಕಳಲ್ಲಿ ಎರಡನೇಯವರಾಗಿದ್ದರು. ಅವರ ತಾಯಿ ಹಾಗೂ ಇಬ್ಬರು ಮಕ್ಕಳು ಭಿನ್ನಚೇತನರಾಗಿರುವ ಕುಟುಂಬಕ್ಕೆ ಈ ಸಾವು ಮತ್ತಷ್ಟು ಸಂಕಷ್ಟ ತಂದಿದೆ.
ಗುರುವಾರ ಅಪರಾಹ್ನ ಗೂಡಿನಬಳಿಯ ಮಸ್ಜಿದ್-ಎ-ಮುತ್ತಲಿಬ್ ಮಸೀದಿಯಲ್ಲಿ ಮೃತರ ದಫನ ಕಾರ್ಯ ನೆರವೇರಿಸಲಾಯಿತು.

ಮೃತರ ಮನೆಗೆ ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಇದೇ ವೇಳೆ ದುಃಖತಪ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.