


ಡೈಲಿವಾರ್ತೆ: 03/ನ./2026




ರೋಟರಿ ಹಂಗಾರಕಟ್ಟೆ ಸಾಸ್ತಾನ – ಗ್ರೀನ್ ಬೋರ್ಡ್ ಕೊಡುಗೆ

ಸಾಸ್ತಾನ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವಡಿ ಇಲ್ಲಿಗೆ ರೋಟರಿ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷೆ ರೊ ಕುಸುಮಾ ಮನೋಜ್ ಕೊಡಮಾಡಿದ ಗ್ರೀನ್ ಬೋರ್ಡ್ ಗಳನ್ನು ರೋಟರಿ ಜಿಲ್ಲಾ ಗವರ್ನರ್ ರೊ. ಬಿ.ಎಂ ಭಟ್ ರವರು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.

ಸಹಾಯಕ ಗವರ್ನರ್ ರೊ ವಿಜಯ ಕುಮಾರ್ ಶೆಟ್ಟಿ,
ವಲಯ ಪ್ರತಿನಿಧಿ
ರೊ ಸೀತಾರಾಮ ಎಸ್.
ರೋಟರಿ ಜಿಲ್ಲಾ ಪ್ರಥಮ ಮಹಿಳೆ
ರೊ. ವೀಣಾ ಎಂ ಭಟ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ನಾಗೇಶ ಮರಕಾಲ,
ಶಿಕ್ಷಣ ಇಲಾಖೆಯ ಅಧಿಕಾರಿಗಳಾದ
ಶ್ರೀ ಸುರೇಶ್ ಕುಂದರ್, ಹಿಂದಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ರೋಟರಿ ಸದಸ್ಯರು, ಶಿಕ್ಷಕ ವೃಂದ, ಹಾಗೂ ಮಕ್ಕಳ ರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಕಾರ್ಯದರ್ಶಿ ಕೆ ರಾಜಾರಾಮ ಐತಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ರೇಖಾ ಪೂಜಾರಿ ವಂದಿಸಿದರು.

