ಡೈಲಿವಾರ್ತೆ: 03/ನ./2026

ಐರೋಡಿ ಗೋಳಿಬೆಟ್ಟು ಶಾಲೆಗೆ ಸಾಸ್ತಾನ ಹಂಗಾರಕಟ್ಟೆ ರೋಟರಿಯಿಂದ ಅಡುಗೆ ಕೋಣೆ ಕೊಡುಗೆ

ಸಾಸ್ತಾನ: ರೋಟರಿ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಮತ್ತು ರೋಟರಿ ಅಧ್ಯಕ್ಷೆ ರೊ. ಕುಸುಮಾ ಮನೋಜ್ ರವರು ಜೊತೆಯಾಗಿ ಸುಮಾರು 1.60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಡುಗೆ ಕೋಣೆಯನ್ನು ರೋಟರಿ ಜಿಲ್ಲಾ ಗವರ್ನರ್
ರೊ ಬಿ ಎಂ ಭಟ್ ರವರು ಉದ್ಘಾಟಿಸಿದರು.

ವಲಯ 3 ರ ಸಹಾಯಕ ಗವರ್ನರ್ ರೊ ವಿಜಯ ಕುಮಾರ್ ಶೆಟ್ಟಿ, ವಲಯ ಪ್ರತಿನಿಧಿ ರೊ ಸೀತಾರಾಮ ಎಸ್, ರೊ ವೀಣಾ ಎಂ ಭಟ್ ರೋಟರಿ ಅಧ್ಯಕ್ಷೆ
ರೊ ಕುಸುಮಾ ಮನೋಜ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ
ಶ್ರೀ ಶಿವರಾಮ ಕುಲಾಲ್, ಐರೋಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ರೋಟರಿ ಸದಸ್ಯರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಶ್ರೀ ಮಹೇಶ್ ಮೊಗೇರ ವಂದಿಸಿದರು.
ರೋಟರಿ ಕಾರ್ಯದರ್ಶಿ
ಕೆ ರಾಜಾರಾಮ ಐತಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.