ಡೈಲಿವಾರ್ತೆ: 11/ನ./2026

ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ -24 ನೇ ವರ್ಷದ ಕಾರ್ತಿಕ ಮಾಸದ ಭಜನೆಗೆ ಚಾಲನೆ

ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ನಡೆಯುತ್ತಿರುವ 24 ನೇ ವರ್ಷದ ಕಾರ್ತಿಕ ಮಾಸದ ನಿರಂತರ ಭಜನೆಗೆ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಚಂದ್ರಶೇಖರ ಉಪಾಧ್ಯರು ಉದ್ಘಾಟಿಸಿ ಹಿಂದಿನ ದಿನಗಳಲ್ಲಿ ಮನೆ ಮನೆಗಳಲ್ಲಿ ಸಂಜೆ ನಡೆಯುತ್ತಿದ್ದ ಭಜನೆ ಇಂದು ಮರೆಯಾಗುತ್ತಿದೆ. ಈ ಕಾಲಘಟ್ಟದಲ್ಲಿ ಬ್ರಾಹ್ಮಣ ಮಹಾಸಭಾದ ಈ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಗುರು ನರಸಿಂಹ ದೇವಸ್ಥಾನದ ಶ್ರೀ ರಾಮ ಮಂದಿರದಲ್ಲಿ ನಡೆದ ಈ ಸಮಾರಂಭದಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯ ಶ್ರೀ ಕೆ ತಾರಾನಾಥ ಹೊಳ್ಳ ಶುಭ ಹಾರೈಸಿದರು.

ಸಭಾದ ಗೌರವಾಧ್ಯಕ್ಷ ಶ್ರೀ ಎಂ ಶಿವರಾಮ ಉಡುಪ, ಅಧ್ಯಕ್ಷ ಶ್ರೀ ಪಟ್ಟಾಭಿರಾಮ ಸೋಮಯಾಜಿ, ಅರ್ಚಕ ಶ್ರೀ ರಾಮದಾಸ ಭಟ್ಟ, ಸಭಾದ ಪದಾಧಿಕಾರಿಗಳು, ವಿಪ್ರ ಮಹಿಳಾ ವಲಯದ ಅಧ್ಯಕ್ಷೆ ಶ್ರೀಮತಿ ವನಿತಾ ಉಪಾಧ್ಯ, ಸಾಲಿಗ್ರಾಮ ಕೂಟ ಮಹಾ ಜಗತ್ತು ಮಹಿಳಾ ಅಧ್ಯಕ್ಷೆ ಶ್ರೀಮತಿ ಯಶೋಧಾ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ರಾಮ ಭಜನಾ ಸಂಘ ಸಾಲಿಗ್ರಾಮ, ಶ್ರೀ ಮಹಾ ವಿಷ್ಣು ಭಜನಾ ಸಂಘ ಪಾರಂಪಳ್ಳಿ, ಶ್ರೀ ರಾಮ ವಿಶ್ವಸ್ಥ ಮಂಡಳಿ ಬಾಳ್ಕುದ್ರು, ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಂದಾರ್ತಿ ಇವರು ಉದ್ಘಾಟನಾ ಭಜನೆಯನ್ನು ಏರ್ಪಡಿಸಲಾಗಿತ್ತು.
ಸಭಾದ ಕಾರ್ಯದರ್ಶಿ
ಕೆ ರಾಜಾರಾಮ ಐತಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಶ್ರೀ ಸುಬ್ರಾಯ ಉರಾಳ
ಶ್ರೀ ನಾಗರಾಜ ಉಪಾಧ್ಯ ಸಹಕರಿಸಿದರು .