


ಡೈಲಿವಾರ್ತೆ: 11/ನ./2026




ಬಂಟ್ವಾಳ : ಮನೆಯ ಬೆಡ್ ರೂಮ್ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಬಂಟ್ವಾಳ : ಮನೆಯ ಬೆಡ್ರೂಮ್ ನಲ್ಲಿರುವ ಮಂಚದ ಮೇಲೆ ವ್ಯಕ್ತಿಯೊಬ್ಬರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಬಡ್ಡೂರುಖಾನ್ ಎಂಬಲ್ಲಿ ನಡೆದಿದೆ.
ಮೃತರನ್ನು ವಿನ್ಸೆಂಟ್ ಡಿ.ಸೋಜ (48) ಎಂದು ಗುರುತಿಸಲಾಗಿದೆ.
ವಿನ್ಸೆಂಟ್ ಡಿ.ಸೋಜ ಅವರು ಕಳೆದ ಆರು ವರ್ಷಗಳಿಂದ ತಮ್ಮ ಸಂಬಂಧಿಕರಾದ ಜೈಸನ್ ಲೋಬೋ ಅವರ ಮನೆ ಹಾಗೂ ತೋಟದ ಕೆಲಸ ಮಾಡಿಕೊಂಡಿದ್ದರು. ಅವಿವಾಹಿತರಾಗಿದ್ದ ಅವರು ಇದೇ ವಿಚಾರವಾಗಿ ಮನನೊಂದು ವಿಪರೀತ ಮದ್ಯ ಸೇವಿಸುತ್ತಿದ್ದು, ತಮ್ಮ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎನ್ನಲಾಗಿದೆ. ನ.10 ರಂದು ಬೆಳಗ್ಗೆ ನೆರೆಮನೆಯ ಸ್ಟ್ಯಾನಿ ಡಿ.ಸೋಜ ಅವರ ದೂರವಾಣಿ ಕರೆಯಂತೆ
ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ವಿನ್ಸೆಂಟ್ ಅವರು ಸುಮಾರು ಐದಾರು ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ಜೈಸನ್ ಲೋಬೋ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯು.ಡಿ.ಆರ್. ಸಂಖ್ಯೆ 55/2026ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

