


ಡೈಲಿವಾರ್ತೆ: 11/ನ./2026




ಹಿರಿಯ ಪತ್ರಕರ್ತ ಗೋಪಾಲ ಅಂಚನ್ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ, ಆರೋಗ್ಯದ ಬಗ್ಗೆ ವಿಚಾರಣೆ, ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು

ಬಂಟ್ವಾಳ : ಕಳೆದ ಐದು ವರ್ಷಗಳಿಂದ ಅನಾರೋಗ್ಯದಲ್ಲಿದ್ದು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ, ಸಾಮಾಜಿಕ ಚಿಂತಕ ಆಲದಪದವು ಗೋಪಾಲ ಅಂಚನ್ ಅವರ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಪ್ರಮುಖರು ಭೇಟಿ ನೀಡಿದರು.

ಅನಾರೋಗ್ಯದ ಬಗ್ಗೆ ಮಾತುಕತೆ ನಡೆಸಿದ ಬಿ.ರಮಾನಾಥ ರೈ ಮತ್ತು ಪ್ರಮುಖರು ಗೋಪಾಲ ಅಂಚನ್ ಅವರ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯಧನ ನೀಡಿದರು. ಇದೇ ಸಂದರ್ಭ ಸಾಹಿತ್ಯ, ಸಾಂಸ್ಕ್ರತಿಕ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸರಕಾರದ "ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ" ಪುರಸ್ಕ್ರತರಾದ ಹಿನ್ನೆಲೆಯಲ್ಲಿ ಗೋಪಾಲ ಅಂಚನ್ ಅವರನ್ನು ಸನ್ಮಾನಿಸಿ ಅಭಿನಂದಿಸಿದ ರೈ ಅವರು ಅಂಚನ್ ಅವರ ಮೂರು ದಶಕಕ್ಕೂ ಹೆಚ್ಚು ಕಾಲದ ಸಾಹಿತ್ಯ, ಸಾಂಸ್ಕ್ರತಿಕ, ಶೈಕ್ಷಣಿಕ ಮತ್ತು ಜನಜಾಗೃತಿ ಕ್ಷೇತ್ರದ ಸೇವೆ ಶ್ಲಾಘನೀಯ ವಾದುದು ಎಂದು ಪ್ರಶಂಸಿದರು.
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ನೆಲ್ಲಿಗುಡ್ಡೆ ಶ್ರೀ ಸಂಯುಕ್ತ ಕೃಷ್ಣ ಜನ್ಮಾಷ್ಠಮಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್. ಅಂಚನ್, ವಾಮದಪದವು ವಲಯ ಯುವ ಬಂಟರ ಸಂಘದ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ ಗಂಟಾರಬೆಟ್ಟು ಗುತ್ತು, ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿ ಗುತ್ತು, ಚೆನ್ನೈತ್ತೋಡಿ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅಜ್ಜಿಬೆಟ್ಟು, ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಕುಮಾರ್ ನಾಯರ್ ಕುಮೇರು, ಯತೀಶ್ ಶೆಟ್ಟಿ ವಿಜಯನಗರ, ರಾಜೀವ ಗಟ್ಟಿ ಬಸ್ತಿಕೋಡಿ, ಸುರೇಶ್ ಶೆಟ್ಟಿ ನಂದಿಲ, ಹರೀಶ ಸಪಲ್ಯ ಆಲದಪದವು, ಲಿಂಗಪ್ಪ ಪೂಜಾರಿ ಶ್ರೀನಿವಾಸ ನಗರ ಮೊದಲಾದವರು ಉಪಸ್ಥಿತರಿದ್ದರು.

