


ಡೈಲಿವಾರ್ತೆ: 12/ನ./2026




ರಾಷ್ಟ್ರೀಯ ಶಿಕ್ಷಣ ದಿನಾಚರಣೆ: ಕರ್ನಾಟಕ ಸರಕಾರದಿಂದ ಭಟ್ಕಳದ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಸಂಸ್ಥೆಗೆ ರಾಜ್ಯಮಟ್ಟದ ಗೌರವ

ಭಟ್ಕಳ: ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಮಹತ್ವದ ಕೊಡುಗೆಯನ್ನು ಪರಿಗಣಿಸಿ, ಕರಾವಳಿ ಕರ್ನಾಟಕದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಭಟ್ಕಳದ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಸಂಸ್ಥೆಯನ್ನು ಕರ್ನಾಟಕ ಸರಕಾರ ರಾಜ್ಯಮಟ್ಟದಲ್ಲಿ ಗೌರವಿಸಿದೆ.
ನ.11, 2026ರಂದು ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು.
ಸಂಸ್ಥೆಯ ಪರವಾಗಿ ಅಂಜುಮನ್ ಅಧ್ಯಕ್ಷ ಯೂನುಸ್ ಕಾಝಿಯಾ ಅವರು ಸರಕಾರದ ಗೌರವವನ್ನು ಸ್ವೀಕರಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆಯು ಸಲ್ಲಿಸಿರುವ ಸೇವೆ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಮಾನ್ಯತೆ ನೀಡಲಾಗಿದೆ. ಸರಕಾರದ ಈ ಗೌರವವು ಸಂಸ್ಥೆಯ ಶೈಕ್ಷಣಿಕ ಸಾಧನೆ ಮತ್ತು ಸೇವೆಗೆ ಸಂದ ಮನ್ನಣೆಯಾಗಿದೆ.

