


ಡೈಲಿವಾರ್ತೆ: 12/ನ./2026




ಬಂಟ್ವಾಳ : ಸ್ವರಾಜ್ ಸ್ಟುಡಿಯೋ ಮಾಲಕರ ಪುತ್ರಿ ನೇಹಾ (29) ನಿಧನ

ಬಂಟ್ವಾಳ ; ಪಾಣೆಮಂಗಳೂರು – ಮೆಲ್ಕಾರ್ ನ ಸ್ವರಾಜ್ ಸ್ಟುಡಿಯೋ ಮಾಲಕ ರಾಜರತ್ನ ಅವರ ಏಕೈಕ ಪುತ್ರಿ ನೇಹಾ (29) ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಕಳೆದ ಒಂದು ವರ್ಷದಿಂದ ತಲೆಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ನೇಹಾ ಹಾಗೂ ಅವರ ಪತಿ ಪ್ರತೀಕ್ ಅವರು ಉದ್ಯೋಗ ನಿಮಿತ್ತ ಕುವೈತ್ನಲ್ಲಿ ನೆಲೆಸಿದ್ದರು. ಮೃತರ ಅಂತಿಮ ವಿಧಿವಿಧಾನಗಳು ಬಿಸಿರೋಡಿನ ಮಯ್ಯರಬೈಲಿನಲ್ಲಿರುವ ಪತಿಯ ಮನೆಯಲ್ಲಿ ನೆರವೇರಿತು. ಮೃತರು ಪತಿ ಪ್ರತೀಕ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

