ಡೈಲಿವಾರ್ತೆ: 26/ನ./2026

ಇಂದು ನೀಲಾವರ ಮೇಳದ 2026–27ನೇ ಸಾಲಿನ ತಿರುಗಾಟದ ಪ್ರಥಮ ಸೇವೆಯಾಟ

ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರದ ಶ್ರೀ ಮಹಿಷಮರ್ದಿನಿ ದಶಾವತಾರ ಯಕ್ಷಗಾನ ಮಂಡಳಿಯ 2026–27ನೇ ಸಾಲಿನ ತಿರುಗಾಟದ ಪ್ರಥಮ ದೇವರ ಸೇವೆಯಾಟವು ಇಂದು (ನ.26, ಗುರುವಾರ) ರಾತ್ರಿ 8 ಗಂಟೆಗೆ ಕ್ಷೇತ್ರದ ಆವರಣದಲ್ಲಿ ನಡೆಯಲಿದೆ.

ತಿರುಗಾಟದ ಶುಭಾರಂಭದ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ಗಣಹೋಮಾದಿ ವಿವಿಧ ಧಾರ್ಮಿಕ ಹಾಗೂ ದೇವತಾ ಕಾರ್ಯಗಳು ಜರುಗಲಿವೆ. ರಾತ್ರಿ 8 ಗಂಟೆಗೆ ಸರಿಯಾಗಿ ‘ದಶಮುಖ ದಿಗ್ವಿಜಯ–ಕಾರ್ತಿಕೇಯ ಕಲ್ಯಾಣ’ ಪೌರಾಣಿಕ ಪ್ರಸಂಗದ ಸೇವೆಯಾಟ ಪ್ರದರ್ಶನಗೊಳ್ಳಲಿದೆ.

ಪ್ರಸಕ್ತ ಸಾಲಿನ ತಿರುಗಾಟದಲ್ಲಿ ಮೇಳವು ಪೌರಾಣಿಕ ಪ್ರಸಂಗಗಳ ಜತೆಗೆ ಹಾಸ್ಯಮಯ ಹಾಗೂ ಕುತೂಹಲಭರಿತ ಸಾಮಾಜಿಕ ಪ್ರಸಂಗಗಳನ್ನೂ ಪ್ರದರ್ಶಿಸಲಿದೆ. ಹರಕೆ ಸೇವೆಯಾಟ ಹಾಗೂ ಪ್ರಸಂಗಗಳ ಕುರಿತ ಹೆಚ್ಚಿನ ವಿವರಗಳಿಗೆ ಆಸಕ್ತರು 9164765898, 9986111989 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಮೇಳದ ಪ್ರಕಟಣೆ ತಿಳಿಸಿದೆ.