ಹೊನ್ನಾವರ : ಬೆಳಿಗ್ಗೆ ಕಸ ಸಂಗ್ರಹಣೆಗೆ ಹೋದ ಸಂದರ್ಭದಲ್ಲಿ ಏರು ರಸ್ತೆಯ ಮೇಲೆ ವಾಹನ ನಿಲ್ಲಿಸಿ ಅದರಿಂದ ಇಳಿದ ಪರಿಣಾಮವಾಗಿ ತಗ್ಗು ಪ್ರದೇಶದ ಎಮ್ಮೆಪೈಲ್ ಹತ್ತಿರ ಪಲ್ಟಿಯಾಗಿ, ಓರ್ವ ಪೌರ ಕಾರ್ಮಿಕ ಗಾಯ ಗೊಂಡ ಘಟನೆ ನಡೆದಿದೆ.

ಕೆಲ ದಿನಗಳಿಂದ ಟ್ರಾಕ್ಟರ್ ನ ಡೀಸೆಲ್ ಟ್ಯಾಂಕ್ ಸೋರಿಕೆಯಾಗುತ್ತಿದ್ದು, ಸೋರಿಕೆಯಾದ ಡೀಸೆಲ್ ಕೆಳಗೆ ಬೀಳದಂತೆ ಟ್ಯಾಂಕ್ ನ ಕೆಳಗೆ ಬಕೆಟ್ ಜೋತು ಬಿಟ್ಟಿದ್ದರು ಎನ್ನಲಾಗಿದೆ. ಕಸ ವಿಲೇವಾರಿ ಮಾಡುವ ಟ್ರಾಕ್ಟರ್ ನಿರ್ವಹಣೆ ಇಲ್ಲದೆ ಅವಘಡಕ್ಕೆ ಎದುರು ನೋಡುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.