ಮಸ್ಕಿ. .ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ರಾಯಚೂರು ವತಿಯಿಂದ ಮಸ್ಕಿ ತಾಲೂಕಿನ ತುರವಿಹಾಳ ವಲಯದಲ್ಲಿ ಬರುವ ಬಳಗಾ ನೂರು ವಲಯದ 3ನೇvಅಂಗನವಾಡಿ ಕೇಂದ್ರದಲ್ಲಿ ಮೇಲ್ವಿಚಾರಕರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ರಕ್ಷಣೆ ಪೋಷಣೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬಾಲ್ಯವಿವಾಹ ಬಾಲಕಾರ್ಮಿಕತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮಾನಸಿಕ ಕಿರುಕುಳ ತಡೆಯುವುದರ ಕುರಿತು ಗುಂಪು ಚರ್ಚೆ ಮಾಡಲಾಯಿತು.31 ಅಂಗನವಾಡಿ ಕಾರ್ಯಕರ್ತರು,2 ಮೇಲ್ವಿಚಾರಕರು ಒಟ್ಟು ಭಾಗವಹಿಸುವವರ ಸಂಖ್ಯೆ 33 ಈ ಕಾರ್ಯ ಕ್ರಮದ ಅಧ್ಯಕ್ಷತೆ ಹಿರಿಯ ಮೇಲ್ವಿಚಾರಕಿ ಶ್ರೀಮತಿ ಸವಿತಾ ಚಂದ್ರರೆಡ್ಡಿ ವಹಿಸಿದ್ದರು.


ಕಾಯ೯ಕ್ರಮದ ವೇದಿಕೆಯಲ್ಲಿ ಶ್ರೀಮತಿ ಸುನಿತಾ ಶ್ರೀಮತಿ ಶಾಂತ ಹಾಗೂ ಮಕ್ಕಳ ಸಹಾಯವಾಣಿಯ ತಂಡದ ಸದಸ್ಯರಾದ ಶ್ಯಾಮಪ್ಪ ನಾಗಪ್ಪ ಶ್ರೀ ಮತಿ ಹಾಗೂ ಅಂಗನವಾಡಿಯ ಕಾರ್ಯಕರ್ತೆಯರು ಭಾಗವಹಿಸಿದ್ದರು.