ಡೈಲಿ ವಾರ್ತೆ:19 ಜನವರಿ 2023

ಬಿ.ಸಿ.ರೋಡ್ : ಜ.20 ರಿಂದ ಫೆ.8 ರ ವರೆಗೆ ಕರಾವಳಿ ಕಲೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ.

ಬಂಟ್ವಾಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು “ಚಿಣ್ಣರ ಲೋಕ ” ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ, ಚಿಣ್ಣರಲೋಕ ಸೇವಾಬಂಧು ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕಲೋತ್ಸವ -2023, ಸಾಂಸ್ಕೃತಿಕ ಕಾರ್ಯಕ್ರಮ ಜ.20 ರಿಂದ ಫೆ.8 ರ ವರೆಗೆ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದ ಅಂತರಾಷ್ಟ್ರೀಯ ಕ್ರೀಡಾ ಪಟು ದಿ. ಉದಯ ಚೌಟ ಮಾಣಿ ಕಲಾ ವೇದಿಕೆಯಲ್ಲಿ ನಡೆಯಲಿದೆ ಎಂದು ಸಮಿತಿ ಸಂಚಾಲಕ ಮೋಹನದಾಸ ಕೊಟ್ಟಾರಿ ತಿಳಿಸಿದರು.

ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿರಂತರವಾಗಿ 20 ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜೊತೆಗೆ ಕಾರ್ಯಕ್ರಮ ಉದ್ಘಾಟನೆ ಸಭಾ ವೇದಿಕೆಯಲ್ಲಿ ಚಿಣ್ಣರ ಲೋಕ ಸೇವಾ ಬಂಧು ಬಂಟ್ವಾಳ ಇವರಿಂದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಬೋಳಂತೂರು ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು “ದತ್ತು ಸ್ವೀಕಾರ ” ನಡೆಯಲಿದೆ ಎಂದು ತಿಳಿಸಿದರು.


ಕರಾವಳಿ ಸೌರಭ ರಾಜ್ಯ ಪ್ರಶಸ್ತಿಯನ್ನು ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲ, ಉದಯ ಚೌಟ ಸಾಧನ ಪ್ರಶಸ್ತಿಯನ್ನು ಅಂತರರಾಷ್ಟ್ರೀಯ ಕ್ರೀಡಾ ಪಟು ಪ್ರಶಾಂತ್ ರೈ ಕೈಕಾರ, ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿಯನ್ನು ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ ಕುಮಾರಿ ಶ್ರೀನಿಧಿ‌ ಬಿ.ಸಿ.ರೋಡು ಇವರಿಗೆ ಪ್ರಧಾನ ಮಾಡಲಾಗುವುದು.

ನೃತ್ಯ ವೈಭವ, ಕರಾವಳಿ ಸ.ರಿ.ಗ.ಮ.ಪ ಸೀಸನ್ 4 ಅಡಿಸನ್, ನಾಟಕ, ಗಾನ ವೈಭವ , ಕಾನೂನು ‌ಮಾಹಿತಿ ಶಿಬಿರ, ಯಕ್ಷಗಾನ ಬಯಲಾಟ, ಯಕ್ಷನಾಟ್ಯ ವೈಭವ, ಸಂಗೀತ ಲಹರಿ, ಭರತನಾಟ್ಯ ಕಾರ್ಯಕ್ರಮಗಳು ಪ್ರತಿದಿನ ನಡೆಯಲಿದೆ ಎಂದವರು ವಿವರಿಸಿದರು.

ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಸಾಂಸ್ಕೃತಿಕ ಜೊತೆಗೆ ವಿವಿಧ ಸಾಮಾಜಿಕ ಕಾರ್ಯಗಳನ್ನು ಸಂಸ್ಥೆ ನಿರಂತರವಾಗಿ ನಡೆಸುತ್ತಾ ಬಂದಿದೆ. ಕರಾವಳಿ ಕಲೋತ್ಸವ ಎಂಬುದು ಬಿ.ಸಿ.ರೋಡಿನಲ್ಲಿ ಜಾತ್ರೆಯ ವೈಭವವನ್ನು ನೀಡಲಿದೆ,
ಈ ವರ್ಷದ ವಿಶೇಷ ಆಕರ್ಷಣೆ ಬೃಹತ್ ಮಟ್ಟದ ಅಮ್ಯೂಸ್ ಮೆಂಟ್ ಪಾರ್ಕ್ ಹಾಗೂ ಸ್ಟಾಲ್ ಗಳು ಇದ್ದು, ಲಂಡನ್ ಬ್ರಿಡ್ಜ್, ಮಲೇಷಿಯಾನ್, ಟ್ವಿನ್ ಟವರ್ , ಬೋಟ್ ಬಿಲ್ಡಿಂಗ್ ಯೂನಿವರ್ಸಲ್ ಬಾಲ್, ರಿಫಾನ್ ಬಿಲ್ಡಿಂಗ್ ಜನರನ್ನು ಆಕರ್ಷಣೆ ಗೊಳಿಸಲಿದೆ ಎಂದು ಅವರು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಚಿಣ್ಣರ ಅಧ್ಯಕ್ಷೆ ಸಾನ್ವಿ ಶೆಟ್ಟಿ ಜಕ್ರಿಬೆಟ್ಟು, ಪ್ರಮುಖ ರಾದ ಇಬ್ರಾಹಿಂ ಕೈಲಾರ್, ಪುಷ್ಪಲತಾ ಶೆಟ್ಟಿ ಜಕ್ರಿಬೆಟ್ಟು, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಉಪಸ್ಥಿತರಿದ್ದರು.