ಡೈಲಿ ವಾರ್ತೆ:19 ಜನವರಿ 2023
ಸಮಸ್ಯೆ ಕಡೆ ಮುಖಮಾಡಿದ ಅಧಿಕಾರಿಗಳು: ಕೋಟ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತಂತೆ ನವಯುಗ ಕಂಪನಿ ವಿರುದ್ದ ಅಧಿಕಾರಿಗಳು ಗರಂ
ಕೋಟ: ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಿವಿಧ ಸಮಸ್ಯೆಗಳಿಗೆ ಮುಕ್ತಿಗಾಣಿಸಲು ಗುರುವಾರ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ರಾಷ್ಟ್ರೀಯ ಹೆದ್ದಾರಿ ಕೋಟ ಅಮೃತೇಶ್ವರಿ ದೇವಳದ ಸನಿಹದಲ್ಲಿ ಸಾಕಷ್ಟು ಅಪಘಾತ ನಡೆಯುತ್ತಿದ್ದು ಅಲ್ಲಿನ ರಸ್ತೆ ವಿಭಜಕ, ದಾರಿದೀಪ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳ ಕುರಿತು ಗುರುವಾರ ನವಯುಗ ಕಂಪನಿಯವರನ್ನು ಸ್ಥಳಕ್ಕೆ ಕರೆಸಿಕೊಂಡು ತರಾಟೆ ತೆಗೆದುಕೊಂಡು ಈ ಎಲ್ಲಾ ಸಮಸ್ಯೆಗಳಿಗೆ
ಶೀಘ್ರದಲ್ಲೆ ಪರಿಹಾರ ಕಂಡುಕೊಳ್ಳಬೇಕು ಜನಸಾಮಾನ್ಯರ ಭವಣೆ ನಿವಾರಿಸಬೇಕು, ಮುಂದಿನ ದಿನಗಳಲ್ಲಿ ಹೆದ್ದಾರಿ ನಿರ್ವಹಣೆಯಲ್ಲಿ ಲೋಪವಾಗಬಾರದು ಎಂದು ಎಚ್ಚರಿಕೆ ನೀಡಿದರಲ್ಲದೆ ಅಮೃತೇಶ್ವರಿ ಸರ್ಕಲ್ ಬಳಿ ವಿಭಜಕಕ್ಕೆ ಸಿಮೆಂಟ್
ಗೊಡೆ ನಿರ್ಮಿಸುವುದು, ಸರ್ವಿಸ್ ರಸ್ತೆಗೆ ಎರಡು ದಿಕ್ಕಿನಲ್ಲಿ ಹಂಪ್ ಅಳವಡಿಸುವುದು, ಸಮರ್ಪಕ ದಾರಿದೀಪ ಅಳವಡಿಸುವಂತೆ ಖಡಕ್ ಸಂದೇಶ ನೀಡಿದರು.
ಸುಮಾರು ಒಂದುವರೆ ತಾಸು ಸ್ಥಳೀಯ ಜನರೊಂದಿಗೆ ಅಧಿಕಾರಿಗಳು ಸಮಸ್ಯೆ ಆಲಿಸಿ ಸೂಕ್ತ ಕ್ರಮ ಕೈಗೊಳ್ಳವ ಭರವಸೆ ನೀಡಿದರು.
ಕೋಟ ಮಾಂಗಲ್ಯ ಮಂದಿರದಲ್ಲಿ ವಿಭಜಕಕ್ಕೆ ಮನವಿ ಕೋಟ ಅಮೃತೇಶ್ವರಿ ಸರ್ಕಲ್ ವಿಭಜಕ ಮುಚ್ಚಿದರೆ
ಕೋಟ ಹೈಸ್ಕೂಲ್‍ನಿಂದ ಮಣೂರು ಕರಿಕಲ್‍ಕಟ್ಟೆವರೆಗೆ ಕ್ರಮಿಸಬೇಕಾದ ಅವಶ್ಯಕತೆ ಇರುವುದರಿಂದ ಇದಕ್ಕೆ ಪರ್ಯಾಯವಾಗಿ ಕೋಟ ಮಾಂಗಲ್ಯ ಮಂದಿರದ ಬಳಿ ಹೆದ್ದಾರಿ ವಿಭಜಕ ನೀಡುವಂತೆ ಜನಸಾಮಾನ್ಯರು, ಸ್ಥಳೀಯಾಡಳಿತದ
ಪ್ರತಿನಿಧಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್
ಅಧೀಕ್ಷಕರಲ್ಲಿ ಮನವಿ ಮಾಡಿದರು.
ಈ ಕುರಿತಂತೆ ಪಂಚಾಯತ್‍ನಲ್ಲಿ ಸಭೆ ನಡೆಸಿ ಸಮಸ್ಯೆಗಳ
ಕುರಿತು ಲಿಖಿತವಾಗಿ ನೀಡಲು ಅಧಿಕಾರಿಗಳು
ಸೂಚಿಸಿದರು. ಪ್ರವಾಸಿ ಬಂಗ್ಲೆ, ರೈತಸಂಪರ್ಕಕೇಂದ್ರಕ್ಕೆ ಭೇಟಿ
ಕೋಟ ರೈತಸಂಪರ್ಕ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿ ಸಿಬ್ಬಂದಿಗಳ ಕಾರ್ಯವೈಖರಿ ಕುರಿತು ಗರಂ
ಆಗಿದರಲ್ಲದೆ ಇಲ್ಲಿನ ಕೇಂದ್ರದ ನಿರ್ವಹಣೆ ಕುರಿತಂತೆ ಅಸಮಾಧಾನ ಹೊರಹಾಕಿ ಸಮರ್ಪಕವಾಗಿ
ಅಧಿಕಾರಿಗಳು ಇರುವ ಕುರಿತು ಫಲಕ ಅಳವಡಿಸಿ
ಹಾಜರಾತಿ ಹಾಗೂ ಇಲ್ಲಿನ ಕಾರ್ಯಗಳು ವಸ್ತುನಿಷ್ಟೆ
ಹಾಗೂ ರೈತಪರವಾಗಿಸಿಲು ಸೂಚಿಸಿದರು.
ಇದೇ ವೇಳೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರು
ಕೋಟ ಪ್ರವಾಸಿ ಬಂಗ್ಲೆಗೆ ಭೇಟಿ ನೀಡಿ ಕೋಟ ಹೋಬಳಿ
ಪ್ರದೇಶದ ನಾಡಕಛೇರಿ ನಿರ್ಮಿಸುವ ಕುರಿತು
ಅದರ ನೀಲನಕ್ಷೆ , ಸ್ಥಳದ ಕುರಿತು ಮಾಹಿತಿ ಪಡೆದರು. ಈ ಬಗ್ಗೆ ಈಗಾಗಲೇ ನೂತನ ಐಬಿ ರಚನೆ ,ನೂತನ ನಾಡಕಛೇರಿ ಕಟ್ಡಡದ ಬಗ್ಗೆ ತಹಶಿಲ್ದಾರ್ ಬಳಿ ಚರ್ಚಿಸಿದರು.
ಈ ವೇಳೆ ಬ್ರಹ್ಮಾವರ ತಾಲೂಕು ದಂಡಾಧಿಕಾರಿ ರಾಜಶೇಖರ ಮೂರ್ತಿ,ಕೋಟ ನಾಡಕಛೇರಿ ಉಪತಹಶೀಲ್ದಾರ್ ಭಾಗ್ಯಲಕ್ಷ್ಮೀ,ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಕೋಟ ಆರಕ್ಷಕ ಠಾಣೆಯ ಪುಷ್ಭರಾಮ್, ಕೋಟ ಗ್ರಾಮಲೆಕ್ಕಿಗ
ಚಲುವರಾಜು, ಚಿತ್ರಪಾಡಿ ಗ್ರಾಮಲೆಕ್ಕಿಗ ಮಹೇಂದ್ರಆಚಾರ್ಯ, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ನವಯುಗ ಕಂಪನಿಯ ಬಷೀರ್, ಕಿರಣ್, ಯೋಗೀಶ್ ನಾಯರಿ, ಕೋಟ ಗ್ರಾಮಪಂಚಾಯತ್ ಸದಸ್ಯರು
ಮತ್ತಿತರರುಇದ್ದರು.