ಡೈಲಿ ವಾರ್ತೆ:25 ಜನವರಿ 2023
ಬಲು ಅಪರೂಪದ ಹಾರುವ ಹಾವೊಂದು ಪರ್ಕಳದಲ್ಲಿ ಪತ್ತೆ
ಉಡುಪಿ : ಪರ್ಕಳದ ಮಾರ್ಕೆಟ್ ಬಳಿ ಅಪರೂಪದ ಹಾರುವ ಹಾವೊಂದು ಪತ್ತೆಯಾದ ಘಟನೆ ನಡೆದಿದೆ.
ಸುಮಾರು ಎರಡುವರೆ ಅಡಿ ಉದ್ದವಿರುವ ಈ ಹಾವಿನ ಮೈಮೇಲೆ ಕಪ್ಪುಬಳಿ ಗೆರೆಗಳಿದ್ದವು, ಕೆಂಪು ಬಣ್ಣ ಹೊಂದಿತ್ತು ಎಲ್ಲರು ವಿಷಹಾವು ಎಂದು ತಿಳಿದು ಬಯಬೀತರಾಗಿದ್ದರು.
ಉಡುಪಿಯ ಊರಗ ತಜ್ಞ ಗುರುರಾಜ್ ಸನಿಲ್ ರವರಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಬಂದ ಅವರು ಇದೊಂದು ವಿಷ ರಹಿತ ಹಾರುವ ಹಾವು ಎಂದು ಕನ್ನಡದ ಭಾಷೆಯಲ್ಲಿ ಕರೆಯುತ್ತಾರೆ.(ತುಳುಬಾಷೆಯಲ್ಲಿ ಪುಲ್ಲಿ ಪುತ್ರ) ಎಂದು ಕರೆಯುತ್ತಾರೆ ಭಯಪಡುವ ಅವಶ್ಯಕತೆ ಇಲ್ಲ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಗುರುರಾಜ್ ಸನಿಲ್ ತಿಳಿಸಿದ್ದಾರೆ.