ಡೈಲಿ ವಾರ್ತೆ: 26 ಜನವರಿ 2023

ಕಾರ್ಕಳ ಕ್ರಿಯೇಟಿವ್‌ ಪ.ಪೂ ಕಾಲೇಜಿನಲ್ಲಿ 74ನೇ ಗಣರಾಜ್ಯೋತ್ಸವ

ಕಾರ್ಕಳ: ರಾಜ ಪ್ರಭುತ್ವದೆಡೆಯಿಂದ ಪ್ರಜಾಪ್ರಭುತ್ವದ ಕಡೆಗೆ ಸಾಗಿದ ಹೆಗ್ಗುರುತೇ ಗಣರಾಜ್ಯೋತ್ಸವ. ಸಂವಿಧಾನ ನಮಗೆ ಅನೇಕ ಕೊಡುಗೆಗಳನ್ನು ನೀಡಿದೆ. ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ದಿನವಿದು ಆದ್ದರಿಂದ ನಾವೆಲ್ಲರೂ ಸಮಾನರೆಂಬ ಭಾವನೆಯನ್ನು ಸಂವಿಧಾನ ನಮಗೆ ನೀಡಿದೆ.

ಕಾನೂನಿನ ಅಂಶಗಳನ್ನು ಗೌರವಿಸಿ, ರಾಷ್ಟ್ರಧ್ವಜ, ರಾಷ್ಟ್ರೀಯತೆಯನ್ನು ಗೌರವಿಸಿ ಬದುಕಬೇಕು ಎಂದು ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ. ಉಮೇಶ್‌ ಜನವರಿ 26 ರಂದು ನಡೆದ 74 ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಗಣರಾಜ್ಯ ದಿನದ ಸಂದೇಶ ನೀಡಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಶ್ರೀ. ಆದರ್ಶ ಎಂ.ಕೆ ಅವರು ಸಂವಿಧಾನಾತ್ಮಕವಾಗಿ ನಮಗೆ ನೀಡಿರುವ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಪ್ರಜಾಸತ್ತಾತ್ಮಕ ಅಂಶಗಳನ್ನು ಗೌರವಿಸಿ ಸಹಬಾಳ್ವೆ ನಡೆಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ. ಅಶ್ವತ್‌ ಎಸ್‌.ಎಲ್., ಗಣಪತಿ ಭಟ್‌ ಕೆ.ಎಸ್‌, ಉಪನ್ಯಾಸಕರಾದ ವಿನಾಯಕ ಜೋಗ್‌, ಶಿವಕುಮಾರ್‌, ರಾಘವೇಂದ್ರ ರಾವ್‌, ಗಿರೀಶ್‌ ಭಟ್‌, ರಾಜೇಶ್‌ ಶೆಟ್ಟಿ, ಆದಂ ಶೇಕ್‌, ಅಕ್ಷತಾ ಜೈನ್‌, ಪವಿತ್ರಾ ತೇಜ್‌, ನಿಧಿ ಬಿ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರಕಾಶ್‌, ರುವಿಟಾ ಡಿಸೋಜ ಹಾಗೂ ವಸತಿ ನಿಲಯದ ಪಾಲಕರು, ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.