



ಡೈಲಿ ವಾರ್ತೆ: 27 ಜನವರಿ 2023


ಉಳ್ಳಾಲ: ಕಾರಿಗೆ ಢಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಕಾರು ಪಲ್ಟಿ, ಪ್ರಕರಣ ದಾಖಲು!
ಉಳ್ಳಾಲ: ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಕಾರು ಕೊಣಾಜೆ ಸಮೀಪದ ಅರ್ಕಾನ ಸರಕಾರಿ ಪ್ರಾಥಮಿಕ ಶಾಲೆ ಬಳಿ ಪಲ್ಟಿ ಹೊಡೆದ ಘಟನೆ ತಡರಾತ್ರಿ ವೇಳೆ ಸಂಭವಿಸಿದೆ.
ಡಾ. ಮಹಾಲಿಂಗೇಶ್ವರ್ ಭಟ್ ಕೆ.ಪಿ ಎಂಬವರು ಉಪ್ಪಿನಂಗಡಿಯಿಂದ ಮೆಲ್ಕಾರ್ ಮಾರ್ಗವಾಗಿ ದೇರಳಕಟ್ಟೆಗೆ ಬರುತ್ತಿದ್ದರು. ಇದೇ ವೇಳೆ ಹಿಂಬದಿಯಿಂದ ಚೇತನ್ ಕುಮಾರ್ ಎಂಬಾತ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಕಾರು ಎದುರಿನಲ್ಲಿದ್ದ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಅಲ್ಲಿಂದ ಪರಾರಿಯಾಗಲು ಯತ್ನಿಸುವಾಗ ಕಾರು ಚಾಲಕನ ಆಯತಪ್ಪಿ ಪಲ್ಟಿ ಹೊಡೆದಿದೆ.
ಅಪಘಾತದ ಸಂದರ್ಭ ಕಾರು ಚಾಲಕ ಚೇತನ್ ಅಮಲು ಪದಾರ್ಥ ಸೇವಿಸಿದವನಂತೆ ಸಂಶಯ ವ್ಯಕ್ತಪಡಿಸಿ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.