ಡೈಲಿ ವಾರ್ತೆ:05 ಫೆಬ್ರವರಿ 2023
ಬೈಂದೂರು: ಜನ ಪ್ರವಾಹದ ಜಂಗಲ್ಪೀರ್ ಸ್ವಲಾತ್ ಮಜ್ಲಿಸ್
ಬೈಂದೂರು: ಪಾವಿತ್ರತೆಯಿಂದ ಕೂಡಿದ ಕೊಡಮಕ್ಕಿ ಜಂಗಲ್ಪೀರ್ ನಲ್ಲಿ ಬ್ರಹತ್ ಸ್ವಲಾತ್ ಮಜ್ಲಿಸ್ ಹಾಗೂ ಪ್ರಾರ್ಥನಾ ಸಂಗಮವು ಪ್ರೊಜೆಕ್ಟ್ ಅಭಿವೃದ್ಧಿ ಸಮಿತಿಯ ವತಿಯಿಂದ ಗೌಸಿಯ ಮಸೀದಿ ವಠಾರದಲ್ಲಿ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಸಿ ಹೆಚ್ ಅಬ್ದುಲ್ ಮುತ್ತಲಿ ವಂಡ್ಸೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಂಗಲ್ಪೀರ್ ಎಂಬ ಪ್ರದೇಶವು ಹಲವು ಪವಾಡಗಳಿಗೆ ಕಾರಣ ವಾದ ಒಂದು ಊರು, ಇದು ವಕ್ಫ್ ಬೋರ್ಡ್ ಗೆ ಸಂಬಂಧ ಪಟ್ಟ ಜಾಗ ಇಲ್ಲಿ ಅಭಿವೃದ್ಧಿಯನ್ನು ಮಾಡಬೇಕು, ಒಂದು ಪ್ರೆಕ್ಷೇನೀಯ ಸ್ಥಳವಾಗಿ ಮಾರ್ಪಡಿಸುವ ಉದ್ದೇಶದಿಂದ ಈ ಒಂದು ಕಾರ್ಯಕ್ಕೆ ಮುಂದಾಗಿದ್ದು ನಿಮ್ಮೆಲ್ಲರ ಸಹಾಯ- ಸಹಕಾರ ಇರಬೇಕಾಗಿದೆ ಎಂದು ಸಿ ಹೆಚ್ ಮುತ್ತಲಿ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಅಸ್ಸಯ್ಯಿದ್ ಜಾಫರ್ ಅಸ್ಸಖಾಪ್ ತಂಙಳ್ ಕೋಟೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೌಲಾನಾ ಡಾ ಮುಹಮ್ಮದ್ ಫಾಜಿಲ್ ರಝ್ವಿ ಕಾವಳಕಟ್ಟೆ ಮಜ್ಲಿಸ್ ಗೆ ನೇತ್ರತ್ವ ವಹಿಸಿ ಮಾತನಾಡಿದರು ಸೂಫಿ ಸಂತರು ಹಲವು ವರ್ಷಗಳಿಗೆ ಮುನ್ನ ಜಂಗಲ್ಪೀರ್ ನಂತಹ ಪ್ರದೇಶಗಳಿಗೆ ತೆರಳಿ ಪವಿತ್ರ ಇಸ್ಲಾಮಿನ ಸುಂದರ ಆಶಯವನ್ನು ಪ್ರಚುರಪಡಿಸಿ ಅವರ ಜೀವನವನ್ನು ಇತರ ಸಮುದಾಯದವರಿಗು ಮಾದರಿಯಾಗಿ ಮಾರ್ಪಡಿಸುವ ಹಲವಾರು ಕಾರ್ಯಾಚರಣೆಗಳನ್ನು ಮಾಡಿದ್ದಾರೆ ಅವರು ನೀಡಿದ ಪವಿತ್ರ ಸುಂದರ ಆಶಯವನ್ನು ಮತ್ತು ಆದರ್ಶವನ್ನು ಆಂತ್ಯ ದಿನದವರೆಗೆ ಶಾಶ್ವತಗೊಳಿಸುವುದು ನಮ್ಮ ಕರ್ತವ್ಯವೂ ಕೂಡ ಅಂತಹ ಒಂದು ಕಾರ್ಯವನ್ನ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಿರ್ದೇಶನ ಮೇರೆಗೆ ಜಂಗಲ್ಪೀರ್ ಪ್ರೊಜೆಕ್ಟ್ ಅಭಿವೃದ್ಧಿ ಸಮಿತಿ ಈ ಒಂದು ಕಾರ್ಯಕ್ಕೆ ಕೈ ಹಾಕಿರುವುದು ಬಹಳ ಶ್ಲಾಘನೀಯ ಎಂದು ಹಜರತ್ ಹರ್ಷ ವ್ಯಕ್ತ ಪಡಿಸಿದರು.
ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು
ಮಾವಿನಕಟ್ಟೆ ಇಸ್ಮಾಯಿಲ್ ಮದನಿ, ನಾವುಂದ ಅಬ್ದುಲ್ಲತೀಫ್ ಫಾಲಿಲಿ, ಆಕಳಬೈಲು ಇಸ್ಮಾಯಿಲ್ ಮುಸ್ಲಿಯಾರ್, ಸಯ್ಯದ್ ಇಕ್ಬಾಲ್ ಮೌಲಾನಾ, ತೊಯ್ಯಿಬ್ ಮೌಲಾನಾ, ತೌಫೀಖ್ ಹಾಜಿ ನಾವುಂದ, ಸಮದ್ ಬಾಯಿ ಬೈಂದೂರ್ (ಶಾರ್ಜ), ಬಿ ಎಸ್ ಎಫ್ ರಫೀಕ್, ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಬದ್ರುದ್ದೀನ್ ತೌಫೀಖ್ ನಾವುಂದ, ಅಡ್ವಕೇಟ್ ಸುಹಾನ್ , ಸದಸ್ಯರಾದ ಆಸಿಫ್ ಕಟಪಾಡಿ,ಅಬೂಬಕ್ಕರ್ ಮಾವಿನಕಟ್ಟೆ, ಆದಮ್ ಗುಲ್ವಾಡಿ, ಇತರ ನಾಯಕರಾದ ವಸೀಮ್ ಬಾಷಾ, ಅಡ್ವಕೇಟ್ ಇಲ್ಯಾಸ್ , ಇಬ್ರಾಹಿಮ್ ಮಾನಿ ಕೊಳಲು ಮುಜಾಹಿದ್ ಪಾಷಾ ಹಾಗೂ ಮತ್ತಿತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಮೌಲಾನಾ ತಂಝೀರೆ ಆಲಮ್ ಖಿರಾಅತ್ ಪಠಿಸಿದರು
ಪ್ರೊಜೆಕ್ಟ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.