



ಡೈಲಿ ವಾರ್ತೆ:05 ಫೆಬ್ರವರಿ 2023


ಕಲ್ಲಾಪು: ಚಾಲಕನ ನಿಯಂತ್ರಣ ತಪ್ಪಿ ಮೀನು ಸಾಗಾಟದ ಲಾರಿ ಪಲ್ಟಿ
ಉಳ್ಳಾಲ: ಮೀನು ಸಾಗಾಟದ ಟೆಂಪೋ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತೊಕ್ಕೊಟ್ಟು ಕಲ್ಲಾಪು ಎಂಬಲ್ಲಿ ರವಿವಾರ ಮುಂಜಾನೆ (ಫೆ.5 ರಂದು) ರಂದು ನಡೆದಿದೆ.
ಘಟನೆಯಲ್ಲಿ ಲಾರಿ ಚಾಲಕ ಸಾದಿಕ್ ಗಾಯಗೊಂಡಿದ್ದಾರೆ.
ಮಂಗಳೂರು ಧಕ್ಕೆಯಿಂದ ಉಳ್ಳಾಲ ಫಿಶ್ ಮಿಲ್ ಗೆ ಮೀನು ಸಾಗಾಟ ನಡೆಸುತ್ತಿದ್ದ ಟೆಂಪೋ ಕಲ್ಲಾಪು ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಲಿದ್ದು, ಈ ವೇಳೆ ಟಯರ್ ಸಿಡಿದು ರಸ್ತೆಗೆ ಉರುಳಿದೆ. ಘಟನೆಯಿಂದ ರಸ್ತೆ ಸಂಚಾರದಲ್ಲಿ ಅಡಚಣೆಯುಂಟಾಗಿದೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.