ಡೈಲಿ ವಾರ್ತೆ:06 ಫೆಬ್ರವರಿ 2023

ಬೀಜಾಡಿ ಮಿತ್ರ ಸಂಗಮ ರಜತಮಹೋತ್ಸವ ಸಂಪನ್ನ

ಕುಂದಾಪುರ: ಈ ನಾಡಿಗೆ ಒಂದು ಪರಂಪರೆ ಇದೆ. ಹುಟ್ಟಿದ ಊರು, ಹೆತ್ತ ತಂದೆ ತಾಯಿ, ಬದುಕು ನೀಡಿದ ಸಮಾಜವನ್ನು ಎಂದಿಗೂ ಮರೆಯಬಾರದು. ಒಂದು ಸಂಸ್ಥೆ ಹುಟ್ಟಿ ಹಾಕಿದರೇ ಸಾಲದು. ಆ ಸಂಸ್ಥೆಯು ನಿರಂತರವಾಗಿ ಬೆಳೆದು ಸಮಾಜದಲ್ಲಿ ನೆರಳು ನೀಡುವ ದೊಡ್ಡ ವೃಕ್ಷದಂತಾಗಬೇಕು. ಈ ನಿಟ್ಟಿನಲ್ಲಿ ಮಿತ್ರಸಂಗಮ ಸಂಸ್ಥೆ ಸಾಮಾಜಿಕ, ಶೈಕ್ಷಣಿಕ, ಧಾಮಿ೯ಕ, ಆರೋಗ್ಯ ಕ್ಷೇತ್ರದಲ್ಲೂ ಸತತ ಸುದೀರ್ಘ 25 ವರ್ಷಗಳ ಕಾಲ ಗ್ರಾಮದಲ್ಲಿ ಸೇವೆ ನೀಡಿ ಮಾದರಿಯಾಗಿ ತನ್ನ ಕಾರ್ಯನಿರ್ವಹಿಸುತ್ತಿದೆ ಎಂದು ಕಾಪು ಕಳತ್ತೂರು ಗುಮೆ೯ ಫೌಂಡೇಷನ್ ಅಧ್ಯಕ್ಷ ಗುಮೆ೯ ಸುರೇಶ್ ಶೆಟ್ಟಿ ಹೇಳಿದರು.
ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರಸಂಗಮದ ರಜತಮಹೋತ್ಸವ ರಜತಪಥ ನೆರಳು ಬೆಳಿಕಿನ ಸಹಯಾನದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಊರ ಗೌರವ ನಮ್ಮೂರ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.


ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಮಯೂರ ಗ್ರೂಫ್ನ ಮ್ಯಾನೇಜಿಂಗ್ ಡೈರಕ್ಟರ್ ಗೋಪಾಡಿ ಶ್ರೀನಿವಾಸ್ ರಾವ್ ಅಶಯದ ಮಾತುಗಳನ್ನಾಡಿದರು. ಹೊಟೇಲ್ ಉದ್ಯಮಿ ರಾಮಚಂದ್ರರಾವ್, ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜ ಪೂಜಾರಿ, ಸಮಾಜ ಸೇವಕ ಶಂಕರ್ ಅಂಕದಕಟ್ಟೆ ಶುಭ ಹಾರೈಸಿದರು.


ಈ ಸಂದರ್ಭ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂತಿ೯ ಮಂಜರು, ಕೋಟೇಶ್ವರದ ವೈದ್ಯ ಡಾ.ಶ್ರೀಪಾದ ಹೆಗ್ಡೆ ಇವರಿಗೆ ಊರ ಗೌರವ ನಮ್ಮೂರ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅಶಕ್ತರಿಗೆ ಸಹಾಯಧನ ಮತ್ತು ಸ್ವಉದ್ಯೋಗಕ್ಕಾಗಿ ಹೊಲಿಗೆ ಯಂತ್ರ, ವಿಕಲಚೇತನರಿಗೆ ಊರುಗೋಲು ವಿತರಿಸಲಾಯಿತು.


ವೇದಿಕೆಯಲ್ಲಿ ಮಿತ್ರಸಂಗಮದ ಪ್ರಧಾನ ಕಾರ್ಯದಶಿ೯ ರಾಜೇಶ್ ಆಚಾರ್ಯ ಬೀಜಾಡಿ, ರಜತಮಹೋತ್ಸವ ಸಮಿತಿಯ ಕಾಯಾ೯ಧ್ಯಕ್ಷ ಶಂಕರನಾರಾಯಣ ಬಾಯಿರಿ, ಗೌರವಾಧ್ಯಕ್ಷ ವಿಶ್ವನಾಥ್ ಹೆಗ್ಡೆ, ಅಧ್ಯಕ್ಷ ದೀಪಾನಂದ ಉಪಾಧ್ಯಾಯ, ಪ್ರಧಾನ ಕಾರ್ಯದಶಿ೯ ಚಂದ್ರ ಬಿ.ಎನ್ ಉಪಸ್ಥಿತರಿದ್ದರು.
ಗಾಯಕಿ ಸುಷ್ಮಾ ಬೀಜಾಡಿ ಪ್ರಾಥಿ೯ಸಿದರು. ಮಿತ್ರಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಸ್ವಾಗತಿಸಿದರು. ಗೌರವಾಧ್ಯಕ್ಷ ವಾದಿರಾಜ್ ಹೆಬ್ಬಾರ್ ಪ್ರಾಸ್ತಾವಿಕ ಮಾತನಾಡಿದರು. ಪ್ರದೀಪ್ ದೇವಾಡಿಗ ಸಹಾಯಧನದ ಪಟ್ಟಿ ವಾಚಿಸಿದರು. ಎನ್.ಆರ್.ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ರಜತಮಹೋತ್ಸವ ಸಮಿತಿ ಕಾಯಾ೯ಧ್ಯಕ್ಷ ಶಂಕರನಾರಾಯಣ ಬಾಯಿರಿ ವಂದಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಬೀಜಾಡಿ ಮೂಡು ಶಾಲಾ ವಿದ್ಯಾಥಿ೯ಗಳಿಂದ ವಿವಿಧ ವಿನೋದಾವಳಿಗಳು, ಕೆ.ನವೀನಚಂದ್ರ ಕೊಪ್ಪ ನೇತೃತ್ವದ ಶಿವಾನಿ ಮ್ಯೂಸಿಕಲ್ ಆರ್ಕೆಸ್ಟ್ರಾ ಇವರಿಂದ ಸಂಗೀತ ರಸಮಂಜರಿ ಮತ್ತು ರಾಜ್ಯ ಪ್ರಶಸ್ತಿ ಪರಸ್ಕೃತ ತಂಡದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ಜರುಗಿತು.