



ಡೈಲಿ ವಾರ್ತೆ:07 ಫೆಬ್ರವರಿ 2023


ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಬಲಿ: ನಾಲ್ವರಿಗೆ ಗಾಯ, ಚಾಲಕ ವಶಕ್ಕೆ

ಬೆಂಗಳೂರು: ಶಾಸಕ ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ.
ಸೋಮವಾರ ನೃಪತುಂಗ ರಸ್ತೆಯಲ್ಲಿ ಸರಣಿ ಅಪಘಾತ ನಡೆದಿತ್ತು. ಇನ್ನೋವಾ ಕಾರ್ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಡ್ರೈವರ್ ಅಪಘಾತವೆಸಗಿ ಇಬ್ಬರ ಜೀವ ಬಲಿ ಪಡೆದಿದ್ದ. ಮಜೀದ್ ಖಾನ್ ಮತ್ತು ಅಯ್ಯಪ್ಪ ಎಂಬವರು ತಮ್ಮದಲ್ಲದ ತಪ್ಪಿಗೆ ಪ್ರಾಣ ಬಿಟ್ರೆ, ರಿಯಾಜ್ ಪಾಷಾ, ಮೊಹಮದ್ ರಿಯಾಜ್, ಮೊಹಮದ್ ಸಲೀಂ, ಮತ್ತು ಶೇರ್ ಗಿಲಾನಿ ಗಾಯಾಳುಗಳಾಗಿ ಆಸ್ಪತ್ರೆ ಸೇರಿದ್ದಾರೆ.
ಇಷ್ಟಕ್ಕೆಲ್ಲಾ ಕಾರಣ ಶಾಸಕ ಪಾಸ್ ಹೊಂದಿದ್ದ ಇನ್ನೋವಾ ಕಾರ್. ಶಾಸಕ ಹರತಾಳು ಹಾಲಪ್ಪರ ಪಾಸ್ ಕಾರ್‍ನಲ್ಲಿ ಅಂಟಿಸಲಾಗಿತ್ತು. ಅಸಲಿಗೆ ಕೆಎ 50 ಎಂಎ 6600 ನಂಬರಿನ ಇನ್ನೋವಾ ಕಾರ್ ಯಲಹಂಕದ ರಾಮು ಸುರೇಶ್ ಎಂಬವರ ಹೆಸರಲ್ಲಿದೆ. ಈ ರಾಮು ಸುರೇಶ್ ಶಾಸಕ ಹರತಾಳು ಹಾಲಪ್ಪರ ಬೀಗರು ಎನ್ನಲಾಗ್ತಿದೆ.
ಡ್ರೈವರ್ ಮೋಹನ್ ರ್‍ಯಾಶ್ ಡ್ರೈವಿಂಗ್ ಮಾಡಿ ಆಕ್ಸಿಡೆಂಟ್ ಮಾಡಿದ್ದ. ವಿಚಾರ ಏನಂದ್ರೆ ಹೀಗೆ ಎಂಎಲ್‍ಎ ಪಾಸ್‍ಗಳನ್ನ ಯಾರು ಬೇಕಾದ್ರು ಬಳಸಬಹುದಾ..? ಶಾಸಕರ ಪಾಸ್ ಬೀಗರ ವೆಹಿಕಲ್ ಗೆ ಹೇಗೆ ಬಂತು..? ಹೀಗೆ ನೆಂಟ್ರು, ಹಿಂಬಾಲಕರು ಅಂತಾ ಎಲ್ರಿಗೂ ಪಾಸ್ ಕೊಡ್ತಿದ್ರೆ ನಿಯಮಗಳಿಲ್ವಾ.. ಒಂದೇ ಪಾಸನ್ನ ಕಲರ್ ಝೆರಾಕ್ಸ್ ಮಾಡಿಸಿ ಯಾರು ಬೇಕಾದ್ರು ಬಳಸಬಹುದಾ ಅನ್ನೊ ಪ್ರಶ್ನೆಯನ್ನ ಸಾರ್ವಜನಿಕರು ಕೇಳ್ತಿದ್ದಾರೆ.