


ಡೈಲಿ ವಾರ್ತೆ:08 ಫೆಬ್ರವರಿ 2023


ನಿವೃತ್ತ ಅರಣ್ಯಾಧಿಕಾರಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ
ಮಡಿಕೇರಿ: ನಿವೃತ್ತ ಅರಣ್ಯಾಧಿಕಾರಿಯೊಬ್ಬರು ರಿವಾಲ್ವರ್ ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬಸವನತ್ತೂರಿನಲ್ಲಿ ನಡೆದಿದೆ.
ಟಿ.ವಿ.ಶಶಿ (80) ಆತ್ನಹತ್ಯೆಗೈದ ವ್ಯಕ್ತಿ. ಕೊಡಗಿನ ವಿವಿಧೆಡೆ ರೇಂಜರ್ ಆಗಿ ಸೇವೆ ಸಲ್ಲಿಸಿದ್ದ ಶಶಿಧರ್ ಅನಾರೋಗ್ಯ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿದ್ರಾಹೀನತೆಯಿಂದ ಬಳಲುತ್ತಿದ್ದ ಶಶಿ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದುಕೊಂಡಿದ್ದಾರೆ.