ಡೈಲಿ ವಾರ್ತೆ:09 ಫೆಬ್ರವರಿ 2023
ಫೆಬ್ರವರಿ 9 ರಿಂದ 12 ರ ತನಕ ಜಾಮಿಯಾ ಇರ್ಫಾನಿಯ ಚಪ್ಪಾರ ಪಡವ್ 35ನೇ ವಾರ್ಷಿಕ ಹಾಗೂ 21ನೇ ಬಿರುದು ದಾನ ಮಹಾ ಸಮ್ಮೇಳನ
ಮಂಗಳೂರು : ಕೇರಳ, ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕಿನ ಚಪ್ಪಾರಪಡವಿನಲ್ಲಿ ಕಳೆದ ಮೂರು ದಶಕಗಳಿಂದ ಧಾರ್ಮಿಕರ ರಂಗದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಜಾಮಿಯಾ ಇರ್ಫಾನಿಯಾ ಚಪ್ಪಾರಪಡವು ಇದರ 35ನೇ ವಾರ್ಷಿಕ ಹಾಗೂ 21ನೇ ಬಿರುದುದಾನ ಮಹಾ ಸಮ್ಮೇಳನವು ಫೆಬ್ರವರಿ 9 ರಿಂದ 12 ರ ತನಕ ನಡೆಯಲಿದೆ ಎಂದು ಕರ್ನಾಟಕ ಇರ್ಫಾನೀಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಶೇಖ್ ಮುಹಮ್ಮದ್ ಇರ್ಫಾನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಆಧ್ಯಾತ್ಮಿಕ ಲೋಕದ ಮಹಾ ವಿದ್ವಾಂಸರು ಸಾತ್ವಿಕ ಮಹಾ ಪುರುಷರು, ಸಹಸ್ರಾರು ವಿದ್ವಾಂಸರ ಆತ್ಮೀಯ ಗುರು ಜನಸಾಮಾನ್ಯರಿಗೆ ಆತ್ಮೀಯ ಬೋಧನೆಯನ್ನು ನೀಡಿ ದಾರಿ ದೀಪ ವಾಗಿರುವ ಶೈಖುನಾ ಚಪ್ಪಾರಪ್ಪಡವ್ ಉಸ್ತಾದ್ ರ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಸಮ್ಮೇಳನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದಾರೆ.
ಜಾಮಿಯಾದ ಅಧೀನದಲ್ಲಿ 15 ರಷ್ಟು ಜೂನಿಯರ್ ಕಾಲೇಜುಗಳು ಕಾರ್ಯಾಚರಿಸುತ್ತಿವೆ. ಕರ್ನಾಟಕದಲ್ಲೂ ಇದರ ಶಾಖೆಗಳಿವೆ. ಶರೀಅತ್ ಕಾಲೇಜುಗಳು, ಹಿಫ್ಲುಲ್ ಕುರಾನ್ ಕಾಲೇಜುಗಳು ಮತ್ತು ಯತೀಂ ಖಾನಗಳು ಇದರ ಸಹ ಸಂಸ್ಥೆಗಳಾಗಿದೆ. ಜಾಮಿಯಾ ಇರ್ಫಾನಿಯಾದಲ್ಲಿ ಸುಮಾರು 400 ರಷ್ಟು ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ, ಒಟ್ಟು ಈ ಸಂಸ್ಥೆಗಳಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸುಮಾರು 700 ರಷ್ಟು ಇರ್ಫಾನಿ ಬಿರುದು ದಾರಿಗಳಾದ ಉಲಮಾಗಳು ದೇಶದ ವಿವಿಧ ಧಾರ್ಮಿಕ ಸೇವಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಸಂಘ ಸಂಸ್ಥೆಗಳು, ಹತ್ತಕ್ಕಿಂತಲೂ ಹೆಚ್ಚು ಐ.ಡಿ.ಎಸ್. ಶಾಖೆಗಳು ಸಂಸ್ಥೆಯ ಏಳಿಗೆಗಾಗಿ ಕಾರ್ಯಚರಿಸುತ್ತಿದೆ. ಜಿಲ್ಲೆಯಿಂದ ಸಾವಿರಾರು ಮಂದಿ ಸಮ್ಮೇಳನಕ್ಕೆ ತೆರಳಲಿದ್ದಾರೆ. ಈಗಾಗಲೇ ಸುಮಾರು 50ರಷ್ಟು ಬಸ್ಸುಗಳು ಬುಕ್ ಮಾಡಲಾಗಿದೆ. ಕರ್ನಾಟಕದಿಂದ ನೂರಾರು ವಿದ್ಯಾರ್ಥಿಗಳು ಪ್ರಸ್ತುತ ಸಂಸ್ಥೆಗಳಲ್ಲಿ ವಿದ್ಯಾನಿರತರಾಗಿದ್ದಾರೆ. ಮಹಾ ಸಮ್ಮೇಳನಕೆ ದೇಶ ವಿದೇಶಗಳಿಂದ, ದ್ವೀಪ ಪ್ರದೇಶಗಳಿಂದಲೂ ಗಣ್ಯರು ಆಗಮಿಸಲಿದ್ದಾರೆ, ಕರ್ನಾಟಕದಿಂದ ಸಮಸ್ತ ಕೇರಳ ಜಮೀಯತುಲ್ ಉಲಮಾ ಇದರ ಕೇಂದ್ರ ಮುಶಾವವರ ಸದಸ್ಯರೂ, ಉಳ್ಳಾಲ ಸೈಯದ್ ಮದನಿ ಅರಬಿ ಕಾಲೇಜಿನ ಪ್ರಾಂಶುಪಾಲ ಉಸ್ಮಾನುಳ್ ಫೈಝಿ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ .
ಪೆ.9 ರಂದು ಬದ್ರ್ ಮೌಲಿದ್ , ಧ್ವಜಾರೋಹಣ, ಕುತುಬಿಯತ್ . ಪೆ.10ರಂದು ಅಜ್ಮೀರ್ ಮೌಲಿದ್ ಸ್ವಲಾತ್ ಮಜ್ಲಿಸ್, ಪೆ.11 ರಂದು ವೈವಿಧ್ಯಮಯ ಸೆಮಿನಾರ್ ವೆಬ್ಬಿನಾರುಗಳು , ಪೆ.12 ರಂದು ಮೊಹಲ್ಲಾ ಸಂಗಮ, ಪ್ರವಾಸಿ ಸಂಗಮ ಜರುಗಲಿದೆ . ಮಗ್ರಿಬ್ ನಮಾಜಿನ ಬಳಿಕ ಸಮಾರೋಪ ಸಮಾರಂಭ, , ನಸಿಹತ್ ಮಜ್ಲಿಸ್, ಮತ್ತು ಬಿರುದು ದಾನ ಮಹಾ ಸಮ್ಮೇಳನ ಶೈಖುನಾ ಉಸ್ತಾದರ ನಸೀಹತ್ ಮತ್ತು ದುಆ ಸಮ್ಮೇಳನ ನಡೆಯಲಿದೆ ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.