



ಡೈಲಿ ವಾರ್ತೆ:09 ಫೆಬ್ರವರಿ 2023


ಉಜಿರೆ ಲಾಡ್ಜ್ ನಲ್ಲಿ ಅನೈತಿಕ ಚಟುವಟಿಕೆ ಪ್ರಕರಣ: ನಾಲ್ವರ ವಿರುದ್ಧ ಪ್ರಕರಣ, ಇಬ್ಬರಿಗೆ ನ್ಯಾಯಾಂಗ ಬಂಧನ
ಬೆಳ್ತಂಗಡಿ: ಉಜಿರೆಯ ಲಾಡ್ಜ್ ಒಂದರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಲ್ಲಿಗೆ ಮಂಗಳವಾರ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಲಾಡ್ಜ್ ಗೆ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ಐವರು ಮಹಿಳೆಯರನ್ನು ರಕ್ಷಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ಸಂತೋಷ್ (33) ಹಾಗೂ ಇರ್ಷಾದ್ (28) ನನ್ನು ಬಂಧಿಸಿದ್ದರು. ಐದು ಮಂದಿ ಮಹಿಳೆಯರನ್ನು ಮಂಗಳೂರಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.
ಲಾಡ್ಜ್ ನವರ ಮೇಲೂ ಕೇಸು:
ಇಬ್ಬರು ಆರೋಪಿಗಳಾದ ಸಂತೋಷ್ ಹಾಗೂ ಇರ್ಷಾದ್ ತೀವ್ರ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಲಾಡ್ಜ್ ನಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗೆ ಸಂಬಂಧಿಸಿ ಇದರ ನಿರ್ವಹಣೆ ಮಾಡುತ್ತಿದ್ದ ಸುರೇಶ್ ಪೂಜಾರಿ ಮತ್ತು ರಮೇಶ್ ಪೂಜಾರಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದ್ದು, ಇವರಿಬ್ಬರೂ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.