ಡೈಲಿ ವಾರ್ತೆ:09 ಫೆಬ್ರವರಿ 2023

ಯುವಕರು ದಾರಿ ತಪ್ಪದಂತೆ ಎಚ್ಚರಿಸುವ ಜವಾಬ್ದಾರಿ ಧಾರ್ಮಿಕ ಪಂಡಿತರದ್ದು : ಅಹ್ಮದುಲ್ ಕಬೀರ್ ಅಮ್ಜದಿ
ಕಟಪಾಡಿ-ಮಣಿಪುರ ದಫ್ ಸ್ಪರ್ಧೆ : ಅಳೇಕಲ, ಸರಕಾರಿಗುಡ್ಡೆ, ಅಕ್ಕರೆಕರೆ ತಂಡಗಳಿಗೆ ದಫ್ ಪ್ರಶಸ್ತಿ

ಉಡುಪಿ : ಧಾರ್ಮಿಕ ಪಂಡಿತರು ಯುವ ಸಮೂಹಕ್ಕೆ ಪೂರಕವಾದ ಮಾಹಿತಿಗಳನ್ನು ಕಾಲಕಾಲಕ್ಕೆ ನೀಡುವ ಮೂಲಕ ಯುವ ಜನಾಂಗ ಧಾರ್ಮಿಕ ಚೌಕಟ್ಟು ಮೀರದಂತೆ ಸದಾ ಎಚ್ಚರಿಸಿ ಮುನ್ನಡೆಸುವುದು ಕಾಲದ ಬೇಡಿಕೆಯಾಗಿದೆ ಎಂದು ಕಟಪಾಡಿ-ಮಣಿಪುರ ರಹ್ಮಾನಿಯಾ ಜುಮಾ ಮಸೀದಿ ಖತೀಬ್ ಅಹ್ಮದುಲ್ ಕಬೀರ್ ಅಮ್ಜದಿ ಹೇಳಿದರು.

ಅವರು ಉಡುಪಿ ಜಿಲ್ಲೆಯ ಕಟಪಾಡಿ-ಮಣಿಪುರದ ರಹ್ಮಾನಿಯಾ ಜುಮಾ ಮಸೀದಿ ಅಧೀನದ ಖಲಂದರ್ ಷಾ ದಫ್ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ಇಲ್ಲಿನ ಮಸೀದಿ ವಠಾರದಲ್ಲಿ ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಸೀದಿ ಅಧ್ಯಕ್ಷ ಝುಬೈರ್ ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ ಎಂ ಅಶ್ರಫ್ ಪಾಣೆಮಂಗಳೂರು, ಉಬೈದುಲ್ಲಾ ಸಖಾಫಿ ಅಲ್-ಮುಈನಿ, ಸಫ್ವಾನ್ ಸಅದಿ ಅಲ್-ಮಳ್‍ಹರಿ, ಮುಹಮ್ಮದ್ ಅಶ್ರಫ್ ಮುಸ್ಲಿಯಾರ್, ಇರ್ಶಾದ್ ಸಅದಿ, ಕಾಪು, ಹಾಜಿ ಬಶೀರ್ ಮದನಿ, ಹಂಝ ಮುಸ್ಲಿಯಾರ್, ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ಟ, ಅಬ್ದುಲ್ ಶಮೀರ್ ಮಣಿಪುರ, ಇಸ್ಮಾಯಿಲ್ ಶೇಖ್ ಅಹ್ಮದ್, ಅಬ್ದುಲ್ ಹಮೀದ್ ಕಲ್ಮಂಜ, ಅಬ್ದುಲ್ ರಶೀದ್ ಅಬ್ಬಾಸ್, ಕೆ ರಫೀಕ್ ಶಹಬಾನ್, ರಶೀದ್ ಅಝೀಝ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



ಇದೇ ವೇಳೆ ದ.ಕ.ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ, ಕಾರ್ಯದರ್ಶಿ ಪಿ ಎಂ ಅಶ್ರಫ್, ಪದಾಧಿಕಾರಿಗಳಾದ ಆರ್.ಕೆ. ರಫೀಕ್ ಮದನಿ ಅಮ್ಮೆಂಬಳ, ಹಾರಿಸ್ ಮದನಿ ಪಾಟ್ರಕೋಡಿ, ಅಶ್ರಫ್ ಮಾಸ್ಟರ್, ಗಾಯಕ ಹರ್ಷದ್ ಕುಂದಾಪುರ, ಬಾತಿಶ್ ಕನ್ನಂಗಾರ್, ಸ್ಥಳೀಯವಾಗಿ ಕಬ್‍ರ್ ಅಗೆಯುವ ಕಾಯಕ ಮಾಡುವ ಉಸ್ಮಾನ್ ಮಟ್ಟು, ಇಸ್ಮಾಯಿಲ್ ಗುಜ್ಜಿ, ಇಬ್ರಾಹಿಂ ಇಬ್ಬು, ಚಾಹಿರ್ ಕೋಟೆ, ರಶೀದ್ ಅಬ್ಬಾಸ್, ಸಲ್ಮಾನ್ ಗುಜ್ಜಿ, ಇಮ್ರಾನ್ ಮಣಿಪುರ ಇವರನ್ನು ಸನ್ಮಾನಿಸಲಾಯಿತು.

ಹಂಝ ಉಸ್ತಾದ್ ಇರಾ, ನಿಝಾಂ ಮಣಿಪುರ, ಅಝೀಝ್ ಮಣಿಪುರ ಹಾಗೂ ಇರ್ಶಾದ್ ಮುನ್ನ ಮಣಿಪುರ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ದಫ್ ಎಸೋಸಿಯೇಶನ್ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಮತ್ತು ಅರ್ಶದ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.

ಅಳೇಕಲ, ಸರಕಾರಿಗುಡ್ಡೆ, ಅಕ್ಕರೆಕರೆ ತಂಡಗಳಿಗೆ ದಫ್ ಪ್ರಶಸ್ತಿ
ಎ,ಬಿ ಹಾಗೂ ಸಿ ಗುಂಪುಗಳಾಗಿ ವಿಂಗಡಿಸಿ ನಡೆಸಲಾದ ದಫ್ ಸ್ಫರ್ದೆಯಲ್ಲಿ ಎ ವಿಭಾಗದಲ್ಲಿ ಉಳ್ಳಾಲ-ಅಳೇಕಲದ ಅನ್ನಜಾತ್ ದಫ್ ತಂಡ ಪ್ರಥಮ, ಕಾಪು-ಪೊಲಿಪು ಖುವ್ವತುಲ್ ಇಸ್ಲಾಂ ದಫ್ ತಂಡ ದ್ವಿತೀಯ, ಕಾಪು-ಮಜೂರಿನ ಸಿರಾಜುಲ್ ಹುದಾ ದಫ್ ತಂಡ ತೃತೀಯ, ಬಿ ಸಿ ರೋಡು-ಕೈಕಂಬದ ರಿಫಾಯಿಯ ದಫ್ ತಂಡ ಚತುರ್ಥ ಸ್ಥಾನ ಪಡೆದುಕೊಂಡರೆ, ಬಿ ವಿಭಾಗದಲ್ಲಿ ಉಡುಪಿ-ಸರಕಾರಿಗುಡ್ಡೆಯ ತವಕ್ಕಲ್ ದಫ್ ತಂಡ ಪ್ರಥಮ, ಕನ್ನಂಗಾರ್ ಇಶಾಅತಿಸ್ಸುನ್ನ ದಫ್ ತಂಡ ದ್ವಿತೀಯ, ಮುಕ್ಕದ ಅಂಜುಮಾನ್ ಸಿರಾಜುಲ್ ಇಸ್ಲಾಂ ದಫ್ ತಂಡ ತೃತೀಯ, ದೇರಳಕಟ್ಟೆ-ರೆಂಜಾಡಿಯ ತಾಜುಲ್ ಹುದಾ ದಫ್ ತಂಡ ಚತುರ್ಥ ಸ್ಥಾನ ಪಡೆದುಕೊಂಡಿದೆ. ಸಿ ವಿಭಾಗದಲ್ಲಿ ಉಳ್ಳಾಲ-ಅಕ್ಕರೆಕರೆಯ ಅಲ್-ಜಝೀರಾ ದಫ್ ತಂಡ ಪ್ರಥಮ, ಅಡ್ಯಾರ್-ಕಣ್ಣೂರು ಯೂಸುಫ್ ಸಿದ್ದೀಕ್ ವಲಿಯುಲ್ಲಾಹಿ ದಫ್ ತಂಡ ದ್ವಿತೀಯ, ಕುಂದಾಪುರ-ನೇರಳಕಟ್ಟೆಯ ಝಂಝಂ ದಫ್ ತಂಡ ತೃತೀಯ ಹಾಗೂ ಕಾಪು-ಬೆಳಪು ಬದ್ರ್ ದಫ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.