ಡೈಲಿ ವಾರ್ತೆ:09 ಫೆಬ್ರವರಿ 2023

ಬಿಜೆಪಿ ಸರಕಾರವು ಜನಸಾಮಾನ್ಯರ ಲೂಟಿ ಹೊಡೆದು ಜನರ ನಡುವೆ ವಿಷ ಬೀಜ ಬಿತ್ತುವ ಕೊಲೆಗಡುಕರ ಸರಕಾರ: ಬಿ.ಕೆ ಹರಿಪ್ರಸಾದ್

ಕೋಟ: ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಎರಡುವರೆ ಸಾವಿರ ಕೋಟಿ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರ.

ಕೋಟ ಮಾಂಗಲ್ಯ ಮಂದಿರದಲ್ಲಿ ಕೋಟ ಬ್ಲಾಕ್ ಆಶ್ರಯದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ ಪ್ರಸ್ತುತವಿರುವ ಕೇಂದ್ರ ಹಾಗೂ ರಾಜ್ಯದಲ್ಲಿ ಇರುವ ಬಿಜೆಪಿ ಸರಕಾರ ದುರಾಡಳಿತದಿಂದ ಕೂಡಿದ ಸರಕಾರವಾಗಿದೆ ಬಡವರ ರಕ್ತ ಹೀರುತ್ತಿದೆ ಜನಸಾಮಾನ್ಯರ ಸಮಸ್ಯೆ ಆಲಿಸುವಲ್ಲಿ ವಿಫಲವಾಗಿದೆ.



ಶಾಸಕರು, ಸಂಸದೆ ಶೋಭಾ ಅಭಿವೃದ್ಧಿ ಬಿಟ್ಟು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ಜನರ ದಿಕ್ಕು ತಪ್ಪಿಸಿ ಅಧಿಕಾರ ಹಿಡಿಯುತ್ತಾರೆ. ಕರಾವಳಿ ಭಾಗದ ಜನರ ಹಕ್ಕುಪತ್ರ ಸಮಸ್ಯೆ, ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್, ಸೀಮೆ ಎಣ್ಣೆ ನೀಡಲು ವಿಫಲವಾಗಿದೆ. ಸರಕಾರ ಭ್ರಷ್ಟಾಚಾರದಲ್ಲೆ ಕಾಲಹರಣ ಮಾಡುತ್ತಿದೆ ಇದೊಂದು 40 ಪರ್ಸೆಂಟ್ ಸರಕಾರವಾಗಿದೆ, ಬಡ ಹಾಗೂ ಮಧ್ಯಮವರ್ಗದವರು ಬದುಕಲು ಸಾಧ್ಯವಿಲ್ಲವೆನ್ನುವಂತೆ ಬೆಲೆ ಗಗನಕ್ಕೆರಿಸಿ ಆಡಳಿತ ನಡೆಸುತ್ತಿದೆ, ಜನರ ತೆರಿಗೆ ಹಣ ಅದಾನಿ, ಅಂಬಾನಿ ಪಾಲಾಗುತ್ತಿವೆ, ಇದೊಂದು ಲೂಟಿ ಹೊಡೆಯುವ ಸರಕಾರವಾಗಿದೆ, ಜಾತಿ ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ ನಡುವೆ ವಿಷ ಬೀಜ ಬಿತ್ತಿ ಕೊಲೆಗಡುಕರ ಸರಕಾರವಾಗಿದೆ ಎಂದು ಕಟುಕಿದರಲ್ಲದೆ , ಇತ್ತ ಜನರ ದಾರಿ ತಪ್ಪಿಸಿ ಗುಜರಾತ್ ಮಾದರಿ ಸರಕಾರ ಮಾಡಲು ಹೊರಟಿದ್ದೇವೆ ಎಂದು ಹೇಳುತ್ತಾರೆ, ನಮ್ಮ ರಾಜ್ಯ ಇನ್ನೊಂದು ಗುಜರಾತ್ ಆಗುವುದು ಬೇಡ ನಮ್ಮ ರಾಜ್ಯ ಹಿಂದಿನ ಆಡಳಿತ ನಡೆಸಿದ ಸರಕಾರವೇ ಸಾಧನೆಯ ಪುಟ ತೆರೆಸಿದೆ. ಪ್ರಧಾನಿ ಹಾಗೂ ಕೇಂದ್ರದ ಸಚಿವರು ಚುನಾವಣಾ ಸಂದರ್ಭದಲ್ಲಿ ಮಾತ್ರ ಕರ್ನಾಟಕ ನೆನಪಾಗುತ್ತದೆ ಇನ್ನುಳಿದ ಸಂದರ್ಭ ಈ ರಾಜ್ಯದ ಕಡೆ ಮುಖವೇ ಮಾಡುವುದಿಲ್ಲ ಎಂದು ಲೇವಡಿ ಮಾಡಿದರು.ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಯುವ ಸಮೂಹವನ್ನು ದಿಕ್ಕು ತಪ್ಪಿಸಿ ಪೊಳ್ಳು ಹಿಂದುತ್ವ ಪ್ರದರ್ಶಿಸುತ್ತಿದ್ದಾರೆ, ಇದಕ್ಕೆ ಇತ್ತೀಚಿಗಿ ಪ್ರವೀಣ್ ಪೂಜಾರಿ,ಪ್ರವೀಣ್ ನೆಟ್ಯಾರು ಪ್ರಕರಣಗಳೆ ಸಾಕ್ಷಿ , ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಮಂಪರು ಪರೀಕ್ಷೆ ಮಾಡಿಸುವ ಅವಶ್ಯಕತೆ ಇದೆ ಎಂದರು. ಒರ್ವ ರಾಜ್ಯದ ಮುಖ್ಯಮಂತ್ರಿಯಾಗಿ ಧರ್ಮ ,ಜಾತಿ ಇಲ್ಲದೆ ರಾಜಕಾರಣ ಮಾಡಬೇಕು ಆದರೆ ಹತ್ಯೆಯಾದ ಫಾಜಿಲ್,ಮಸೂದ್ ಮನೆಗೆ ಸಾಂತ್ವನ ಹೇಳಲು ಹೋಗದೆ ಒಂದು ಧರ್ಮದ ಒಲೈಕೆ ರಾಜಕಾರಣ ಮಾಡುತ್ತಿದ್ದಾರೆ,ಇದೊಂದು ಭೇದಭಾವ ಮಾಡುವ ಆಡಳಿತವಾಗಿದೆ ಎಂದು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು,ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇದು ಬಿಜೆಪಿ ಸರಕಾರದ ಕೊಡುಗೆಯಾಗಿದೆ, ಇಲ್ಲಿನ ಇರ್ವರು ಸಚಿವರಾದ ಕೋಟ ಹಾಗೂ ಸುನೀಲ್ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿ ಕುಂದಾಪುರ ಕುಂದಗನ್ನಡದ ಭಾಷೆ ಪರಿಕಲ್ಪನೆ ಬಗ್ಗೆ ಅಭಿವೃದ್ಧಿಗೊಳಿಸಲುವಲ್ಲಿ ವಿಫಲ ರಾಗಿದ್ದಾರೆ ಎಂದು ಆರೋಪಿಸಿ ಸಿದ್ಧರಾಮಯ್ಯ ನೇತ್ರತ್ವದಲ್ಲಿ ಸರಕಾರ ಬಡವರ ,ಮಧ್ಯಮವರ್ಗದವರ ಪರವಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಆದರೆ ಬಿಜೆಪಿ ನೇತ್ರತ್ವದ ಈಗಿನ ಸರಕಾರ ಆ ಯೋಜನೆಗಳನ್ನು ಮೂಲೆಗುಂಪಾಗಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಿ ತನ್ನಿ ಆ ಮೂಲಕ ಜನಸಾಮಾನ್ಯರ ಸರಕಾರವಾಗಿಸಲು ಕರೆಇತ್ತರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎ.ಐ.ಸಿ.ಸಿ ಕಾರ್ಯದರ್ಶಿ ರೋಝಿ ಎಂ ಜಾನ್, ವಿನಯ ಕುಮಾರ್ ಸೊರೆಕೆ, ಎಂ ಎ ಗಫೂರ್,ಅಶೋಕ ಕುಮಾರ್ ಕೊಡವೂರ,ಶ್ಯಾಮಲಾ ಭಂಢಾರಿ,ಮಲ್ಯಾಡಿ ಶಿವರಾಮ ಶೆಟ್ಟಿ, ಶೇಖರ್ ಪೂಜಾರಿ,ರಾಜು ಪೂಜಾರಿ,ದಿನೇಶ್ ಹೆಗ್ಡೆ ಮೊಳಹಳ್ಳಿ,ಕಿಶನ್ ಹೆಗ್ಡೆ,ಅಶೋಕ್ ಪೂಜಾರಿ,ತಿಮ್ಮ ಪೂಜಾರಿ,ಹರೀಷ್ ಕಿಣಿ,ರಮೇಶ್ ಕುಂದರ್,ರೋಶನಿ ಒಲಿವೇರ ಮತ್ತಿತರರು ಉಪಸ್ಥಿತರಿದ್ದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಸ್ವಾಗತಿಸಿದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಢಾರಿ ಪ್ರಾಸ್ತಾವನೆಗೈದರು. ಕಾರ್ಯಕ್ರಮವನ್ನು ಅಕ್ಷಯ ಶೆಟ್ಟಿ ನಿರೂಪಿಸಿದರು.ಚಂದ್ರ ಆಚಾರ್ಯ ,ಹಾಗೂ ಗಣೇಶ್ ಪೂಜಾರಿ ಸಹಕರಿಸಿದರು.