ಡೈಲಿ ವಾರ್ತೆ:09 ಫೆಬ್ರವರಿ 2023
ಫೆ. 10, 11 ರಂದು ಕೋಟ ಶಾಂತಮೂರ್ತಿ ಶ್ರೀ ಶನೀಶ್ವರ ದೇವಳದ 28ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ
ಕೋಟ : ಇಲ್ಲಿನ ಹಾಡಿಕೆರೆಬೆಟ್ಟು ವಿನ್ನಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಾಂತಮೂರ್ತಿ ಶ್ರೀ ಶನೀಶ್ವರ ಹಾಗೂ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಇದರ 28ನೇ ವರ್ಷದ ವಾರ್ಷಿಕ ಪ್ರತಿಷ್ಟಾ ವರ್ಧಂತಿ ಮಹೋತ್ಸವವು ಫೆ.10 ಮತ್ತು 11 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.
ಫೆ.10 ರಂದು ಬೆಳಿಗ್ಗೆ ಸಾಮೂಹಿಕ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಗಣಹೋಮ, ಶ್ರೀ ಕನ್ನಿಕಾ ಪರಮೇಶ್ವರಿ ದೇವರಿಗೆ 108 ಕಲಶ ಸ್ಥಾಪನೆ, ಕಲಶಾಧಿವಾಸ ಹೋಮ, ಕಲಶಾಭಿಷೇಕ, ಚಂಡಿಕಾಹೋಮ ಜರುಗಲಿರುವುದು ಹಾಗೂ ಪರಿವಾರ ದೇವರುಗಳಾದ ಗಣಪತಿ, ಈಶ್ವರ,ಆಂಜನೇಯ, ನವಗ್ರಹ, ಕಾಕವಾಹನ, ಕ್ಷೇತ್ರಪಾಲ,ಬಲೀಂದ್ರ ದೇವರುಗಳಿಗೆ ಕಲಶಾಭಿಷೇಕ, ಅಧಿವಾಸ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿರುವುದು.
ಸಂಜೆ 6:00 ಗಂಟೆಗೆ ಶ್ರೀ ಶನೀಶ್ವರ ದೇವರಿಗೆ 108 ಕಲಶ ಸ್ಥಾಪನೆ, ಕಲಶಾಭಿಷೇಕ,ವಾಸ್ತು ಪೂಜೆ, ಸುದರ್ಶನ ಹೋಮ, ಇಂದ್ರಾದಿ ದಿಗ್ಬಲಿ, ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿರುವುದು.
ಫೆ.11 ರಂದು ಶನಿವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಶನೀಶ್ವರ ಸ್ವಾಮಿಗೆ “ಕಲಶಾಭಿಷೇಕ”, ಬೆಳಿಗ್ಗೆ 9:00 ಗಂಟೆಗೆ “ಸಾಮೂಹಿಕ ಶನಿಶಾಂತಿ” ವಿಶೇಷ ಹೂವಿನ ಅಲಂಕಾರ ಪೂಜೆ, ಬೆಳಿಗ್ಗೆ 11:00 ಗಂಟೆಗೆ “ತುಲಾಭಾರ ಸೇವೆ” ಬಳಿಕ “ದರ್ಶನ ಸೇವೆ” ಹಾಗೂ ಮಧ್ಯಾಹ್ನ 12:30ಕ್ಕೆ ಮಹಾ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಮಹಾ “ಅನ್ನ ಸಂತರ್ಪಣೆ” ಕಾರ್ಯಕ್ರಮ ನಡೆಯಲಿರುವುದು.
ಮಧ್ಯಾಹ್ನ ಭಜನೆ, ಸಂಜೆ 4 ರಿಂದ ಶ್ರೀ ರಾಮ ಮಹಿಳಾ ಕುಣಿತ ಭಜನಾ ಮಂಡಳಿ, ಕಂಚುಗೋಡು ಇವರಿಂದ ಬ್ಯಾಂಡ್ ಸೆಟ್ ನೊಂದಿಗೆ ಕುಣಿತ ಭಜನೆ ನಡೆಯಲಿರುವುದು. ಹಾಗೂ ರಾತ್ರಿ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷಗಾನ ವೈಭವ ಬಯಲಾಟ ಜರುಗಲಿರುವುದೆಂದು ಶನೀಶ್ವರ ದೇವಳದ ಪಾತ್ರಿಗಳಾದ ಭಾಸ್ಕರ್ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.