ಡೈಲಿ ವಾರ್ತೆ:09 ಫೆಬ್ರವರಿ 2023
ಫೆ. 11 ರಂದು ಮೂಡುಗಿಳಿಯಾರಿನಲ್ಲಿ ಅಭಿಮತ ಸಂಭ್ರಮ; ಚಿತ್ರ ನಟ ಆನಂತನಾಗ್ ಗೆ ಕೀರ್ತಿಕಲಶ ಪುರಸ್ಕಾರ
ಕೋಟ: ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ಅಭಿಮತ ಸಂಭ್ರಮ ಕಾರ್ಯಕ್ರಮ ಫೆ.11ರಂದು ಸಂಜೆ 6.30 ರಿಂದ ಮೂಡುಗಿಳಿಯಾರಿನ ಅಲ್ಸೆಕೆರೆ ಮಹಾಲಿಂಗೇಶ್ವರ ದೇವಸ್ಥಾನ ಸಮೀಪ ಜರಗಲಿದ್ದು, ಸಂಸ್ಥೆಯ ವತಿಯಿಂದ ಕೊಡಮಾಡುವ 2023ನೇ ಸಾಲಿನ ಕೀರ್ತಿ ಕಲಶ ಪುರಸ್ಕಾರವನ್ನು ಹಿರಿಯ ಚಿತ್ರ ನಟ ಆನಂತ್ ನಾಗ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಅಭಿಮತ ಸಂಭ್ರಮ ಕಾರ್ಯಕ್ರಮದ ಸಂಚಾಲಕ ಉದಯ ಶೆಟ್ಟಿ ಪಡುಕರೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಚಿವ ಸುನೀಲ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಡಾ.ಮೋಹನ್ ಆಳ್ವಾ ಅಧ್ಯಕ್ಷತೆ ವಹಿಸಲಿದ್ದಾರೆ. ಪಶ್ಚಿಮ ವಲಯ ಐ.ಡಿ.ಜಿ.ಪಿ. ಚಂದ್ರಗುಪ್ತ, ಹಿರಿಯ ಪತ್ರಕರ್ತ, ಸಾಹಿತಿ ಜೋಗಿ, ಆಸ್ಟ್ರೇಲಿಯಾದ ಲಿಬರಲ್ ಪಕ್ಷದ ಆಡಳಿತ ಸಮಿತಿ ಸದಸ್ಯೆ ಶಿಲ್ಪಾ ಹೆಗ್ಡೆ, ಡಾ. ವಿವೇಕ ಉಡುಪ ಉಪಸ್ಥಿತಿಯಲ್ಲಿ, ಹಿರಿಯ ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ, ಶೈಕ್ಷಣಿಕ ಸಾಧಕ ಡಾ.ಗಜೇಂದ್ರ ಗುಳ್ಳಾಡಿ, ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಮಾದರಿಯಾಗಿರುವ, ಸುಮಾರು 1800 ವಿದ್ಯಾರ್ಥಿಗಳನ್ನು ಹೊಂದಿರುವ ಒಳಕಾಡು ಪ್ರೌಢಶಾಲೆಗೆ ಕೀರ್ತಿಕಲಶ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ಅನಂತರ ಹಾಡ ಬೆಳದಿಂಗಳು ಸಂಗೀತಾ ಕಾರ್ಯಕ್ರಮ, ಹಾವೇರಿಯ ಶೇಷಗಿರಿ ಕಲಾತಂಡದಿಂದ ನಾಟಕ, ನಂದಗೋಕುಲ ಕಲಾವಿದರಿಂದ ನೃತ್ಯೋಲ್ಲಾಸ ಜರಗಲಿದೆ ಎಂದರು. ಜನಸೇವಾ ಟ್ರಸ್ಟ್ ಅಧ್ಯಕ್ಷ
ಅರುಣ್ ಶೆಟ್ಟಿ ಉಳ್ತೂರು ಟೀಮ್ ಅಭಿಮತ ಸಂಚಾಲಕ ಪ್ರವೀಣ್ ಯಕ್ಷಿಮಠ,ಅಶೋಕ್ ಬನ್ನಾಡಿ, ಟ್ರಸ್ಟ್ ಕಾರ್ಯದರ್ಶಿ, ಅರುಣ್ ಗಿಳಿಯಾರ್, ಖಚಾಂಚಿ ಸುನಿಲ್ ಪಾಂಡೇಶ್ವರ ಸಫಲ್ ಶೆಟ್ಟಿ,ಗಣೇಶ್ ಶೆಟ್ಟಿ ತೊಂಬಟ್ಟು ,ಕಾರ್ತೇಶ್ ಪುತ್ರನ್ ಕೋಟ,ನಾಗರಾಜ್ ಅಲ್ಸೆಕೆರೆ,ರವೀಶ್ ಹೊಸಂಗಡಿ,ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು