



ಡೈಲಿ ವಾರ್ತೆ:10 ಫೆಬ್ರವರಿ 2023


ಉಪ್ಪಿನಂಗಡಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು
ಉಪ್ಪಿನಂಗಡಿ: ಕೆಲ ದಿನಗಳ ಹಿಂದೆ ಕುಪ್ಪೆಟ್ಟಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಗುರುವಾರ ತಡ ರಾತ್ರಿ ನಡೆದಿದೆ.
ಕುಪ್ಪೆಟ್ಟಿ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಮೃತಪಟ್ಟ ಬಾಲಕ. ಗೆಳೆಯನ ಜೊತೆ ಸ್ಕೂಟರ್ ನಲ್ಲಿ ಮದ್ರಸಾಕ್ಕೆ ತೆರಳುವ ವೇಳೆ ವಿರುದ್ಧ ದಿಕ್ಕಿನಲ್ಲಿ ಬಂದ ಆಟೋವೊಂದಕ್ಕೆ ಸ್ಕೂಟರ್ ಢಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಬಾಲಕರಿಬ್ಬರು ಗಂಭೀರ ಗಾಯಗೊಂಡಿದ್ದರು.
ಬಾಲಕನ ಮರಣವು ಕುಟುಂಬಸ್ಥರ ಸಹಿತ ಇಡೀ ಗ್ರಾಮಸ್ಥರನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ