ಡೈಲಿ ವಾರ್ತೆ:11 ಫೆಬ್ರವರಿ 2023

ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದಲ್ಲಿ ಗಾಣಿಗ ಸಮಾಜಕ್ಕಾದ ಅನ್ಯಾಯಕ್ಕೆ ನ್ಯಾಯ ಒದಗಿಸಿದ ಸಮ್ಮೇಳನ ಸಮಿತಿ

ಫೆ. 11-12ರಂದು ಉಡುಪಿಯಲ್ಲಿ ನಡೆಯುವ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನದಲ್ಲಿ ಹಾರಾಡಿ ರಾಮ ಗಾಣಿಗರನ್ನು ಬಳಸಿಕೊಳ್ಳದ ಕುರಿತು ಹಾಗೂ ಸಮ್ಮಾನಿಸಲ್ಪಡುವ 75 ಮಂದಿ ಯಕ್ಷಗಾನ ಕಲಾವಿದರಲ್ಲಿ ಒಬ್ಬರೇ ಒಬ್ಬರು ಗಾಣಿಗ ಕಲಾವಿದರು ಆಯ್ಕೆ ಮಾಡದ ಕುರಿತು ಗಾಣಿಗ ಸಮಾಜದ ಪರವಾಗಿ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ಖಂಡನೆ ವ್ಯಕ್ತಪಡಿಸಿತ್ತು, ಸಮಾಜಕ್ಕಾದ ಅನ್ಯಾಯದ ಕುರಿತು ಧ್ವನಿ ಎತ್ತಿತ್ತು ಇದೀಗ ನಮ್ಮ ಸಮಾಜಕ್ಕಾದ ಅನ್ಯಾಯದ ಕುರಿತು ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಸದಸ್ಯ,ಸಮ್ಮೇಳನ ಸಮಿತಿ ಸದಸ್ಯರಾದ ನಮ್ಮ‌ ಸಮಾಜದ ಕೆ.ಎಂ. ಶೇಖರ ಅವರು ಸಮಿತಿಯ ಪದಾಧಿಕಾರಿಗಳಲ್ಲಿ ಧ್ವನಿ‌ಎತ್ತಿ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎನ್ನುವ ಬೇಡಿಕೆ ಇರಿಸಿ‌‌ ಸಾಕಷ್ಟು ಹೋರಾಟ ನಡೆಸಿ‌ ಗೌರವ ಸಮ್ಮಾನಕ್ಕೆ ನಮ್ಮ ಸಮಾಜದ ಹಿರಿಯ ಯಕ್ಷಗಾನ ವಿದ್ವಾಂಸರಾದ ಬಿರ್ತಿ ಬಾಲಕೃಷ್ಣ ಗಾಣಿಗರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ‌ ಬಗ್ಗೆ ಸಾಕಷ್ಟು ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ಸಮ್ಮೇಳನ ಸಮಿತಿಯ ಪ್ರತಿನಿಧಿಯಾದ ಕೆ.ಎಂ.‌ಶೇಖರ್‌ ಅವರು ಬಾರ್ಕೂರು ವೇಣುಗೋಪಾಲಕೃಷ್ಣ ದೇಗುಲಕ್ಕೆ ಆಗಮಿಸಿ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಸೂರ್ಯನಾರಾಯಣ‌ಗಾಣಿಗ, ಪ್ರ.ಕಾರ್ಯದರ್ಶಿ ನಾಗರಾಜ್ ಗಾಣಿಗ ಹಾಗೂ ಸಮಾಜದ‌ ಪ್ರಮುಖರಾದ ರಾಮಕೃಷ್ಣ ಗಾಣಿಗ, ಗಣೇಶ ಬ್ರಹ್ಮಾವರ, ಗಿರೀಶ್ ಬೆಟ್ಲಕ್ಕಿ, ರಾಜೇಶ್‌ ಅಚ್ಲಾಡಿ, ಪದ್ಮನಾಭ ಗಾಣಿಗ ಮೂಡುಕುದ್ರು, ರವಿರಾಜ್ ಕುಂಭಾಶಿ, ಬಾಲಕೃಷ್ಣ ಗಾಣಿಗ ಜತೆ ಸಭೆ ನಡೆಸಿ ಸಮ್ಮೇಳ ಸಮಿತಿಯಿಂದಾದ ಪ್ರಮಾದಕ್ಕೆ‌ ವಿಷಾಧ‌ ವ್ಯಕ್ತಪಡಿಸಿ, ಗೌರವ ಸಮ್ಮಾನದ ಆದೇಶ ಪತ್ರ, ಕಾರ್ಯಕ್ರಮದ ಆಹ್ವಾನ ಪತ್ರ ಹಸ್ತಾಂತರಿಸಿದರು‌ ಹಾಗೂ ಸಮಾಜದ ಹಿರಿಯ ಕಲಾವಿದ ಹಾರಾಡಿ ರಾಮ ಗಾಣಿಗರಿಗೆ ಗೌರವ ನೀಡಲು ಪ್ರಧಾನ ಸ್ವಾಗತ ಬಾಗಿಲಿಗೆ ರಾಮ ಗಾಣಿಗರ ಹೆಸರನ್ನಿಡುವ ತೀರ್ಮಾನ ತಿಳಿಸಿದರು.


ಈ ಹೋರಾಟಕ್ಕೆ ಸಂದ ಗಾಣಿಗ ರನ್ನು ಸಂತಸ ವ್ಯಕ್ತಪಡಿಸಿ, ನ್ಯಾಯ ಒದಗಿಸುವಲ್ಲಿ ಸಹಕಾರ ನಡೆಸಿದ ಕೆ.ಎಂ. ಶೇಖರ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು.