ಡೈಲಿ ವಾರ್ತೆ:12 ಫೆಬ್ರವರಿ 2023

ಮುಸ್ಲಿಂ ಮಕ್ಕಳಿಗೆ ಮಾಡುವ ಸುನ್ನತಿ( ಮುಂಜಿ) ಆಚರಣೆಗೆ ತಡೆ ನೀಡುವಂತೆ ಹೈಕೋರ್ಟ್ ಗೆ ಅರ್ಜಿ!

ಕೇರಳ; ಮುಸ್ಲಿಂ ಮಕ್ಕಳಿಗೆ ಮಾಡುವ ಸುನ್ನತಿ (ಸುನ್ನತ್)(ಮುಂಜಿ) ಆಚರಣೆಗೆ ತಡೆ ನೀಡುವಂತೆ ಮಧ್ಯಪ್ರವೇಶಿಸಲು ಕೋರಿ ಕೇರಳ ಹೈಕೋರ್ಟ್‌ಗೆ ಧಾರ್ಮಿಕೇತರ ಸಂಘವೊಂದು ಮೊರೆ ಹೋಗಿರುವ ಬಗ್ಗೆ ದಿ‌ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಮುಸ್ಲಿಂ ಹುಡುಗರಲ್ಲಿ ಒಂದು ವರ್ಷದಿಂದ ಐದು ವರ್ಷಗಳವರೆಗೆ ಸುನ್ನತಿ ಮಾಡಲಾಗುತ್ತದೆ.ಇದು ಚಿಕ್ಕ ಮಕ್ಕಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸಂಘವು ಹೇಳಿದೆ.

ಮಕ್ಕಳಿಗೆ ಬಲವಂತವಾಗಿ ಸುನ್ನತಿ ಮಾಡಲಾಗುತ್ತಿದೆ. ಅದು ಅವರ ಆಯ್ಕೆಯಲ್ಲ ಮತ್ತು ಇದು ಅಂತರಾಷ್ಟ್ರೀಯ ಒಪ್ಪಂದಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಕೃತ್ಯವನ್ನು ಕ್ರೂರ, ಅಮಾನವೀಯ ಮತ್ತು ಎಂದು ಅರ್ಜಿದಾರರು ಉಲ್ಲೇಖಿಸಿದ್ದು, ಕೆಲ ಮಕ್ಕಳು ಈ ವೇಳೆ ಮೃತಪಟ್ಟಿದ್ದಾರೆ ಎಂದು ಕೂಡ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.