

ಡೈಲಿ ವಾರ್ತೆ: ಫೆ./14/2026
ನಾಳೆ (ಫೆ 15) ದಾರುಲ್ ಮುಸ್ತಫಾ ಅಕಾಡೆಮಿಯ ದಶವಾರ್ಷಿಕ, 4ನೇ ಸನದುದಾನ, ಇಹ್ಯಾ-ಉ-ಸ್ಸುನ್ನಃ ದರ್ಸ್ ಸಿಲ್ವರ್ ಜ್ಯೂಬಿಲಿ ಮಹಾ ಸಮ್ಮೇಳನ

ಪುತ್ತೂರು : ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ನಚ್ಚಬೆಟ್ಟುವಿನಲ್ಲಿ, ಕರ್ನಾಟಕ ಉಲಮಾ ಒಕ್ಕೂಟದ ಕಾರ್ಯದರ್ಶಿ ತೋಕೆ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ಸಾರಥ್ಯದಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಮುಸ್ತಫಾ ಅಕಾಡೆಮಿ ಸಂಸ್ಥೆಯ ದಶಮಾನೋತ್ಸವ ಮತ್ತು 4 ನೇ ಸನದುದಾನ, ಇಹ್ಯಾ-ಉ-ಸುನ್ನಃ ದರ್ಸ್ ಸಿಲ್ವರ್ ಜ್ಯೂಬಿಲಿ ಮಹಾ ಸಮ್ಮೇಳನವೂ ಫೆ 15ರಂದು ನಡೆಯಲಿದೆ
ನಿನ್ನೆಯಿಂದ ಆರಂಭಗೊಂಡ ಕಾರ್ಯಕ್ರಮ ವಿವಿಧ ಸೆಷನ್ ಗಳಲ್ಲಿ ನಡೆಯುತ್ತಿದ್ದು, ಇದರ ಸಮಾರೋಪ ಮಹಾ ಸಮ್ಮೇಳನ ಫೆ15 ಆದಿತ್ಯವಾರ ನಡೆಯಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಅಜ್ಮೀರ್ ಮೌಲಿದ್ ನಡೆಯಲಿದ್ದು ಅಸ್ಸಯ್ಯಿದ್ ಹಂಝ ತಂಙಳ್ ವಲಯತ್ತಡ್ಕ ನೇತೃತ್ವ ವಹಿಸಲಿದ್ದಾರೆ. ಅಪರಾಹ್ನ 02 ಕ್ಕೆ ಸಂಪೂರ್ಣ ಸುಲ್ತಾನಿ ಮತ್ತು ಫುರ್ಖಾನಿ ಸಂಗಮ ನಡೆಯಲಿದ್ದು, ಅಶ್ರಫ್ ಸಖಾಫಿ ಅಲ್ ಫುರ್ಖಾನಿ ವಿಷಯ ಮಂಡಿಸಲಿದ್ದಾರೆ.
ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭವೂ ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರಾದ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಪ್ರಸ್ತುತ ಸಂಗಮವನ್ನು ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ ಉದ್ಘಾಟಿಸಲಿದ್ದಾರೆ. ಅಸ್ಸಯ್ಯಿದ್ ಶಹೀರ್ ಅಲ್ ಬುಖಾರಿ ಪೋಸೋಟ್ ತಂಙಳ್ ರವರು ಸನದುದಾನ ಪ್ರದಾನ ಮಾಡಲಿದ್ದು, ಸಂಸ್ಥೆಯ ಸಾರಥಿ ಟಿ ಎಂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಸನದುದಾನ ಭಾಷಣ ಮಾಡಲಿದ್ದಾರೆ. ಹಂಝ ಮಿಸ್ಬಾಹಿ ಓಟಪದವು ಮುಖ್ಯ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಎನ್ ಕೆ. ಎಂ ಶಾಫಿ ಸಅದಿ ಬೆಂಗಳೂರು, ಡಾ| ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಅಬೂ ಸುಫ್ಯಾನ್ ಇಬ್ರಾಹಿಂ ಮದನಿ, ಕರ್ನಾಟಕ ಸ್ಪೀಕರ್ ಯು ಟಿ ಖಾದರ್, ಶಾಸಕ ಅಶೋಕ್ ಕುಮಾರ್ ರೈ, ಇನಾಯತ್ ಅಲಿ ಮುಂತಾದ ಗಣ್ಯರು ಮಾತನಾಡಲಿದ್ದಾರೆ
ಪ್ರಸ್ತುತ ಕಾರ್ಯಕ್ರಮದಲ್ಲಿ ಅಸ್ಸೆಯ್ಯದ್ ಜಲಾಲುದ್ದೀನ್ ತಂಙಳ್ ಉಜಿರೆ, ಇಸ್ಮಾಯಿಲ್ ತಂಙಳ್ ಉಜಿರೆ, ಶಿಹಾಬುದ್ದೀನ್ ತಂಙಳ್ ಮದಕ, ಹೈದರ್ ಮದನಿ ಕರಾಯ, ಖಾಸಿಂ ಮದನಿ ಕರಾಯ, ಮುಹಮ್ಮದ್ ಹಾಜಿ ಸಾಗರ, ಅಬ್ದುಲ್ಲತೀಫ್ ಹಾಜಿ ಗೋಲ್ಡನ್, ಯೂಸುಫ್ ಹಾಜಿ ಗೌಸಿಯಾ ಮುಂತಾದ ಪ್ರಮುಖ ಉಲಮಾ ಉಮಾರಗಳು ಭಾಗವಹಿಸಲಿದ್ದಾರೆ ಎಂದು ದಾರುಲ್ ಮುಸ್ತಫಾ ದಶಮಾನೋತ್ಸವ ಸ್ವಾಗತ ಸಮಿತಿಯ ಕನ್ವೀನರ್ ಡಾ| ಉಮರ್ ಫಾರೂಖ್ ಕೊಳಚಪ್ಪು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಅಧ್ಯಾಪಕರಾದ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ, ಸ್ವಾಗತ ಸಮಿತಿಯ ಚೇರ್ಮನ್ ಉಮರ್ ಹಾಜಿ ಬನ್ನೂರು, ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ರಾಜ್ಯ ನಾಯಕರಾದ ಯೂಸುಫ್ ಹಾಜಿ ಸಾಜ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರಾದ ಇಕ್ಬಾಲ್ ಬಪ್ಪಳಿಗೆ ಉಪಸ್ಥಿತರಿದ್ದರು.